ಮೈಸೂರು

ಬಾಲ್ಯ ವಿವಾಹ ತಡೆದ ಮಹಿಳಾ ಮತ್ತು ಮಕ್ಕಳ ಇಲಾಖೆ ಅಧಿಕಾರಿಗಳು

ನಗರದ ಅಶೋಕಪುರಂನ ಶಂಭುಲಿಂಗೇಶ್ವರ ದೇವಾಲಯದ ಸಮುದಾಯ ಭವನದಲ್ಲಿ ಬುಧವಾರ ಬೆಳಗ್ಗೆ ನಡೆಯುತ್ತಿದ್ದ ಅಪ್ರಾಪ್ತೆಯ ಮದುವೆಯನ್ನು ತಡೆಯುವಲ್ಲಿ ಮಹಿಳಾ ಮತ್ತು ಮಕ್ಕಳ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

ಮೈಸೂರು ತಾಲೂಕಿನ ಕೊಪ್ಪಲೂರಿನ 17 ವರ್ಷ 4 ತಿಂಗಳ ಹುಡುಗಿ ಮತ್ತು ಶ್ರೀರಂಗಪಟ್ಟಣದ 24 ವರ್ಷದ ಹುಡುಗನ ಜೊತೆ ವಿವಾಹ ಕಾರ್ಯ ನಡೆಸುತ್ತಿದ್ದರು. ಆ ಸಂದರ್ಭದಲ್ಲಿ ಖಚಿತ ಮಾಹಿತಿ ಮೇರೆಗೆ ಭೇಟಿ ನೀಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಕ್ಕಳ ರಕ್ಷಣಾಧಿಕಾರಿ ವೆಂಕಟೇ‍ಶ್, ಮೇಲ್ವಿಚಾರಕಿ ರಾಧಾಮಣಿ ಮತ್ತು ಅಶೋಕಪುರಂ ಠಾಣೆ ಪೊಲೀಸರು ಬೆಳಗ್ಗೆ 9 ಗಂಟೆ ವೇಳೆಗೆ ಧಾವಿಸಿ ಮದುವೆ ಕಾರ್ಯ ನಿಲ್ಲಿಸಿದ್ದಾರೆ.

ವಧು ಮತ್ತು ವರನ ಪೋಷಕರಿಗೆ ತಿಳುವಳಿಕೆ ನೀಡಿ, ವಧುವಿನ ಜನ್ಮ ದಿನಾಂಕ ದಾಖಲೆಯನ್ನು ನೀಡುವಂತೆ ತಿಳಿಸಿದ್ದೇವೆ. 18 ವರ್ಷ ತುಂಬುವವರೆಗೆ ಮಗಳಿಗೆ ಮದುವೆ ಮಾಡುವುದಿಲ್ಲ ಎಂದು ಪೋಷಕರಿಂದ ಮುಚ್ಚಳಿಕೆ ಬರೆಯಿಸಿಕೊಳ್ಳಲಾಗಿದೆ ಎಂದು ರಾಧಾಮಣಿ ಹೇಳಿದರು.

Leave a Reply

comments

Related Articles

error: