Uncategorized

ಹಾಸನ ಮಾವು ಮೇಳದಲ್ಲಿ ವಿಶೇಷತೆ, 10 ತಿಂಗಳಲ್ಲಿ ಅರಸೀಕೆರೆಗೆ ಹೇಮಾವತಿ ನೀರು: ಜಗದೀಶ್

ಹಾಸನ (ಜೂನ್ 4): ತೋಟಗಾರಿಕೆ ಇಲಾಖೆ, ಹಾಸನ ಹಾಗೂ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಸಂಯುಕ್ತಾಶ್ರಯದಲ್ಲಿ ಹಾಗೂ ಮಾವು ಬೆಳೆಗಾರರ ಸಂಘದ ಸಹಭಾಗಿತ್ವದಲ್ಲಿ ದಿನಾಂಕ 05/06/2018 ರಿಂದ 11/06/2018 ರವರೆಗೆ ನಗರದ ಕೆ.ಎಸ್,ಆರ್,ಟಿ,ಸಿ ಬಸ್ ನಿಲ್ದಾಣದಲ್ಲಿ (ನಗರ ಸಾರಿಗೆ ಬಸ್ ನಿಲ್ದಾಣದಲ್ಲಿ) ಮಾವುಮೇಳ ಆಯೋಜಿಸಲಾಗಿದೆ ಎಂದು ಜಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಗದೀಶ್ ಅವರು ಹೇಳಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ಡಾ|| ಪಿ. ಸಿ. ಜಾಫರ್ ಅವರು ಜೂನ್ 5 ರಂದು ಬೆಳೆಗ್ಗೆ 11.30 ಕ್ಕೆ ಮಾವು ಮೇಳವನ್ನು ಉದ್ಘಾಟಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ರಾಜ್ಯದ ವಿವಿಧ ಜಿಲ್ಲೆಗಳಾದ ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಕೋಲಾರ, ರಾಮನಗರ ಮತ್ತು ಬೆಂಗಳೂರಿನಿಂದ 10 ಪ್ರಗತಿಪರ ಮಾವು ಹಾಗೂ ಹಲಸು ಬೆಳೆಯುವ ರೈತರು ಕಾರ್ಬೈಡ್ ಮುಕ್ತ ಮಾವಿನ ಹಣ್ಣುಗಳನ್ನು ಮಧ್ಯವರ್ತಿಗಳ ಹಾವಳಿಯಿಲ್ಲದೆ ಅತ್ಯಂತ ಸಮಂಜಸವಾದ ಬೆಲೆಯಲ್ಲಿ ಸಾರ್ವಜನಿಕರಿಗೆ ದೊರೆಯಲು ತಮ್ಮ ಮಳಿಗೆಗಳಲ್ಲಿ ಹಣ್ಣುಗಳ ಪ್ರದರ್ಶನ ಹಾಗೂ ಮಾರಾಟ ವ್ಯವಸ್ಥೆ ಮಾಡಲಾಗಿರುತ್ತದೆ.. ಮೇಳದಲ್ಲಿ 12 ಮಳಿಗೆಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಜಗದೀಶ್ ತಿಳಿಸಿದರು.

ಮೇಳವು 05/06/2018 ರಿಂದ 11/06/2018 ರವರೆಗೆ ಉದ್ಘಾಟನೆಯ ದಿನವನ್ನು ಹೊರತು ಪಡಿಸಿ ಬೇರೆಲ್ಲಾ ದಿನಗಳಲ್ಲಿ ಬೆಳಗ್ಗೆ 10 ರಿಂದ ಸಂಜೆ 7 ಗಂಟೆಯ ವರೆಗೆ ಚಾಲ್ತಿಯಲ್ಲಿರುತ್ತದೆ.

ಹಾಸನ ಜಿಲ್ಲೆಯಲ್ಲಿ 2861 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯನ್ನು ಬೆಳೆಯಲಾಗುತ್ತಿದ್ದು ಅಂದಾಜು 21,547 ಟನ್ ಗಳಷ್ಟು ಉತ್ಪತ್ತಿಯನ್ನು ರೈತರು ಪಡೆಯುತ್ತಿದ್ದಾರೆ ಎಂದು ಅವರು ಹೇಳಿದರು.

ಮೇಳದ ಪ್ರಮುಖ ಆಕರ್ಷಣೆ:

ಕರ್ನಾಟಕ ರಾಜ್ಯದಲ್ಲಿ ಬೆಳೆದ ಕಾರ್ಬೈಡ್ ಮುಕ್ತ ವಿವಿಧ ಮಾವು ತಳಿಗಳು ಹಾಗೂ ಮಾವಿನ ಹಣ್ಣಿನಿಂದ ತಯಾರಿಸಿದ ವಿವಿಧ ಉತ್ಪತ್ತಿಗಳ ಪ್ರದರ್ಶನ ಮತ್ತು ಮಾರಾಟ.

ಸುಧಾರಿತ ಮಾವು ತಳಿಗಳಾದ ಆಲ್ಫಾನ್ಸೋ, ಬಾದಾವಿ, ಮಲ್ಲಿಕಾ, ರಸಪುರಿ, ಸೇಂದೂರ, ದಶಹರಿ, ಕೇಸರ್, ನೀಲಮ್, ಮಲ್ಗೋವ ಇತ್ಯಾದಿ ಮಾವಿನ ಹಣ್ಣುಗಳು ಪ್ರದರ್ಶನ ಹಾಗೂ ಮಾರಾಟ ಲಭ್ಯವಿರುತ್ತವೆ (ನೇರವಾಗಿ ರೈತರಿಂದ ಗ್ರಾಹಕರಿಗೆ). ವಿವಿಧ ಬಗೆಯ ಹಲಸಿನ ತಳಿಗಳು ಪ್ರದರ್ಶನ ಹಾಗೂ ಮಾರಾಟಕ್ಕೆ ಲಭ್ಯವಿರುತ್ತವೆ. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಸುವರ್ಣಾವಕಾಶದ ಸದುಪಯೋಗ ಪಡೆದುಕೊಂಡು ಮಾವು ಮತ್ತು ಹಲಸಿನ ಮೇಳವನ್ನು ಯಶಸ್ವಿಗೊಳಿಸಬೇಕೆಂದು ಮೇಳದ ಆಯೋಜಕರ ಕೋರಿಕೆ.

ಕೃತಕ ಹಣ್ಣು ಬರಿಸುವಿಕೆ ಪ್ರಕ್ರಿಯೆ ಸಂಪೂರ್ಣ ನಿಷೇಧ: ಮಾವು ಸೇರಿದಂತೆ ಎಲ್ಲಾ ಬಗೆಯ ಫಲಗಳನ್ನು ರಾಸಯನಿಕ ಅಥವಾ ಇತರ ಅನೈಸಗಿರ್ಧಕ ಪ್ರಕ್ರಯೆ ಮೂಲಕ ಹಣ್ಣು ಮಾಡಿ ಮಾರಾಟ ಮಾಡುವುದನ್ನು ನಿಷೇಧಿಸದೆ .ಈ ಬಗ್ಗೆ ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮಕಯಯಗೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆ ಆಧಿಕಾರಿಗಳಿಗೆ ಸೂಚನೆ ನೀಡಿಲಾಗಿದೆ ನಿರಂತರವಾಗಿ ಹೆಚ್ಚಿನ ತಪಾಸಣೆಗಳನ್ನು ನಡೆಸಲು ತಿಳಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಸಿಇಓ ಅವರು ಹೇಳಿದರು.

ಮಾರುಕಟ್ಟೆ ವ್ಯವಸ್ಥೆ ವೃದ್ದಿಗೆ ಚಿಂತನೆ: ಜಿಲ್ಲೆಯಲ್ಲಿ ಫಲ ಪುಷ್ಪ ಹಾಗೂ ತರಕಾರಿಗಳ ಉತ್ಪಾದನೆ ಹೆಚ್ಚುತ್ತಿದೆ ಆದರೆ ಅವುಗಳ ಸಂಸ್ಕರಣೆ ಮತ್ತು ಮಾರುಕಟ್ಟೆಗೆ ಸೂಕ್ತ ವ್ಯವಸ್ಥೆಗಳ ಕೊರತೆ ಇತ್ತು ಇದನ್ನು ಅಭಿವೃದ್ದಿ ಪಡಿಸುವತ್ತ ಗಮನ ಹರಿಸಲು ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಸಿ.ಇ.ಓ ಜಗದೀಶ್ ಅವರು ತಿಳಿಸಿದರು.

ಹಣ್ಣು ಪಲ್ಪ್ ಕಾರ್ಖಾನೆ ಮತ್ತು ಹಣ್ಣು ಮಾಗಿಸುವ ಗೃಹಗಳ ನಿರ್ಮಾಣಕ್ಕೆ ಇಲಾಖೆಗೆ ಸೂಕ್ತ ಪ್ರಸ್ತಾವನೆ ಸಲ್ಲಿಸುವಂತೆ ತೋಟಗಾರಿಕೆ ಇಲಾಖೆ ಉಪನಿರ್ದೇಶಕರಿಗೆ ಅವರು ಸೂಚನೆ ನೀಡಿದರು.

ಬರ ನಿರ್ವಹಣೆ:

ಈ ವರ್ಷ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದೆ ಅರಸೀಕೆರೆ ತಾಲ್ಲೂಕಿನಲ್ಲಿ ಮಾತ್ರಾ 23 ಹಳ್ಳಿಗಳಿಗೆ ಟ್ಯಾಂಕರ್‍ಗಳ ಮೂಲಕ ನೀರು ಪೂರೈಸುತ್ತಿದ್ದು ಅಲ್ಲಿ ಶಾಶ್ವತ ಕ್ರಮಗಳನ್ನು ಕೈಗೊಳ್ಳಲು ಸೂಚಿಸದರು. ಹಾಲಿ ಇರುವ ಕೊಳವೆಬಾವಿಗಳನ್ನು ಸ್ವಚ್ಚಗೊಳಿಸಲು, ಇನ್ನಷ್ಟು ಆಳಗೊಳಿಸಲು ಹಣ ಬಿಡುಗಡೆ ಮಾಡಲಾಗಿದೆ ಎಂದು ಸಿಇಓ ಹೇಳಿದರು.

10 ತಿಂಗಳಿನಲ್ಲಿ ಅರಸೀಕೆರೆಗೆ ಹೇಮಾವತಿ ನೀರು:

ಅರಸೀಕೆರೆ ತಾಲ್ಲೂಕಿನಲ್ಲಿ 250 ಕೋಟಿ ರೂಪಾಯಿ ವೆಚ್ಚದಲ್ಲಿ ಬಹುಗ್ರಾಮ ಕುಡಿಯುವ ನೀರು ಯೋಜನೆ ಕೈಗೆತ್ತಿಕೊಳ್ಳಲಾಗಿದೆ 10 ತಿಂಗಳಲ್ಲಿ ಈ ಕಾಮಗಾರಿಯನ್ನು ಪೂರ್ಣಗೊಳ್ಳಲಿದೆ ಹೇಮಾವತಿಯಿಂದ ನೀರನ್ನು ಎತ್ತಿ ಅರಸೀಕೆರೆ ತಾಲ್ಲೂಕಿನ ಎಲ್ಲಾ ಹಳ್ಳಿಗಳಿಗೂ ನೀರು ಪೂರೈಸು ಯೋಜನೆ ಇದಾಗಿದೆ ಎಂದು ಅವರು ಹೇಳಿದರು.

ಉದ್ಯೋಗ ಖಾತ್ರಿ ಯೋಜನೆಯಡಿ ಜಲ್ಲೆಯಲ್ಲಿ ಉತ್ತಮ ಕೆಲಸವಾಗಿದೆ ಸಾರ್ವಜನಿಕರ ಆಸ್ತಿ ಸ್ವಚ್ಚತಾ ಕಾರ್ಯಕ್ರಮಗಳು ನೆಡೆದಿವೆ ಆದರೆ ನಿರ್ಮಾಣ ಕಾರ್ಯಗಳಲ್ಲಿ ಕಲ್ಲುಗಣಿಗಳ ಧೂಳನ್ನು ಎಂ.ಸ್ಯಾಂಡ್ ಎಂದು ಬಳಸದಂತೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.

ಎಲ್ಲಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿಯೂ ಕಡ್ಡಾಯವಾಗಿ ವಾರ್ಡ್ ಸಭೆಗಳನ್ನು ನೆಡೆಸಲು ಸೂಚಿಸಲಾಗಿದೆ ಮತ್ತು ಅವುಗಳ ವೀಡಿಯೋ ಚಿತ್ರೀಕರಣವನ್ನು ಮಾಡಲು ನಿರ್ದೇಶನ ನೀಡಿದೆ ಎಂದು ಜಗದೀಶ್ ತಿಳಿಸಿದರು.

ಸಾರ್ವಜನಿಕರು ಜಿಲ್ಲಾ ಪಂಚಾಯ್ತಿ ವ್ಯಾಪ್ತಿಗೆ ಸಂಬಂಧಿಸಿದಂತೆ ಕುಂದು ಕೊರತೆಗಳ ಬಗ್ಗೆ ತಮ್ಮನ್ನು ನೇರವಾಗಿ ಸಂಪರ್ಕಿಸಬಹುದಾಗಿದೆ ಜನಸ್ನೇಹಿ ಆಡಳಿತಕ್ಕೆ ಒತ್ತು ನೀಡಲಾಗುತ್ತಿದೆ ಎಂದು ಜಿಲ್ಲಾ ಪಂಚಾಯತ್ ಸಿಇಓ ಹೇಳಿದರು.

ತೋಟಗಾರಿಕೆ ಇಲಾಖೆ ಉಪನಿರ್ದೇಶಕರಾದ ಸಂಜಯ್ ಅವರು ಮಾವು ಮೇಳದ ವಿಶೇಷತೆಗಳು ಹಾಗೂ ಕೃತಕ ಹಣ್ಣು ಬರಿಸುವ ಕ್ರಮಗಳ ಪತ್ತೆ ಬಗ್ಗೆ ವಿವರಿಸಿದರು. (ಎನ್.ಬಿ)

Leave a Reply

comments

Related Articles

error: