ಮೈಸೂರು

ಕಾರ್ಯಪಾಲಕ ಇಂಜಿನಿಯರ್ ಜಗನ್ನಾಥ ಜಾದವ್ ಎಸಿಬಿ ಬಲೆಗೆ

ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಆಗಿರುವ ಜಗನ್ನಾಥ ಜಾದವ್ ಗುರುವಾರದಂದು ಬೆಳಗ್ಗೆ ಮಡಿಕೇರಿ ಮನೆಯಲ್ಲಿ ಗುತ್ತಿಗೆದಾರರಿಂದ 82 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಕ್ವಾಟರ್ಸ್ ಟೆಂಡರ್ ಬಿಲ್ ಪಾವತಿ ಮತ್ತು ಹೊಸ ಟೆಂಡರ್‍ಗೆ ಅನುಮತಿ ನೀಡಲು ಪಿಡಬ್ಲ್ಯುಡಿ ಗುತ್ತಿಗೆದಾರರಾಗಿರುವ ಯತೀಶ್ ಎಂಬವರ ಬಳಿ 4 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದ್ದು, ಈ ಬಗ್ಗೆ ಅವರು ಮೈಸೂರಿನ ಎಸಿಬಿ ಪೊಲೀಸ್ ಅಧೀಕ್ಷಕಿ ಕವಿತಾ ಅವರಿಗೆ ದೂರು ನೀಡಿದ್ದರು. ನೋಟು ರದ್ದು ಮಾಡಿರುವುದರಿಂದ ಸಮಸ್ಯೆಯುಂಟಾಗಿದ್ದು, ಮೊದಲಿಗೆ 82 ಸಾವಿರ ರೂ. ನೀಡುವುದಾಗಿ ಯತೀಶ್ ಅವರು ಜಗನ್ನಾಥ್ ಅವರಿಗೆ ತಿಳಿಸಿದ್ದು, ಲಂಚ ನೀಡುವ ವೇಳೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಎಸಿಬಿ ಎಸ್ಪಿ ಕವಿತಾ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಗಜೇಂದ್ರ ಪ್ರಸಾದ್, ಇನ್ಸ್‍ಪೆಕ್ಟರ್ ಅನಿಲ್ ಕುಮಾರ್‍ ಕಾರ್ಯಾಚರಣೆ ನಡೆಸಿದ್ದರು.

Leave a Reply

comments

Related Articles

error: