ಕರ್ನಾಟಕ

ಬಾವಿಯಲ್ಲಿ ಈಜಾಡಲು ತೆರಳಿದ ಶಾಲಾ ಬಾಲಕ ಸಾವು

ರಾಜ್ಯ(ಮಂಡ್ಯ)ಜೂ.4;-  ಬಾವಿಯಲ್ಲಿ ಈಜಾಡಲು ಹೋದ ಶಾಲಾ ಬಾಲಕನೋರ್ವ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಪಾಂಡವಪುರ ಅತ್ತಿಗಾನಹಳ್ಳಿ ಗ್ರಾಮದಲ್ಲಿ ನಡೆದಿದೆ.

ತಾಲೂಕಿನ ಅತ್ತಿಗಾನಹಳ್ಳಿ ಗ್ರಾಮದ ನಿವಾಸಿ ಜಯಸ್ವಾಮಿ-ವಿನುತಾ ಅವರ ಪುತ್ರ ಅಜಯಕುಮಾರ್ ಅಲಿಯಾಸ್ ಅಪ್ಪಿ (8) ಎಂಬಾತ ಮೃತ ಬಾಲಕನಾಗಿದ್ದಾನೆ. ಸುಂಕಾತೊಣ್ಣೂರು ಗ್ರಾಮದಲ್ಲಿ ಖಾಸಗಿ ಕಾನ್ವೆಂಟ್‍ನಲ್ಲಿ 3ನೇ ತರಗತಿ ವ್ಯಾಸಂಗ ಮಾಡುತ್ತಿರುವ ಅತ್ತಿಗಾನಹಳ್ಳಿ ಗ್ರಾಮದ ಅಜಯಕುಮಾರ್ ಹಾಗೂ ಅದೇ ಗ್ರಾಮದ ತನ್ನ ಸ್ನೇಹಿತ 2ನೇ ತರಗತಿಯ ಯಶ್ವಂತ್ ಜತೆಗೆ ಜಮೀನಿನ ಬಳಿ ಇದ್ದ ಬಾವಿಯೊಂದರಲ್ಲಿ ಈಜಾಡಲು ಹೋಗಿದ್ದ. ಈ ವೇಳೆ ಮೊದಲಿಗೆ ಅಜಯಕುಮಾರ್ ಬಟ್ಟೆ ಕಳಚಿ ಈಡಾಜಲು ಬಾವಿಗಿಳಿದಿದ್ದಾನೆ. ಆದರೆ ಈಜು ಬಾರದ ಕಾರಣ ಬಾವಿಯಲ್ಲಿ ಮುಳುಗಿ ಸಾವನ್ನಪ್ಪಿದ. ಯಶ್ವಂತ್ ಅಲ್ಲಿಂದ ಹೆದರಿ ಚೀರಾಡಿಕೊಂಡು ಮನೆಗೆ ಬಂದು ಅಜಯ್‍ಕುಮಾರ್ ನೀರಿನಲ್ಲಿ ಮುಳುಗಿದ್ದಾನೆ ಎಂದು ಪೋಷಕರಿಗೆ ವಿಷಯ ತಿಳಿಸಿದ್ದಾನೆ. ತಕ್ಷಣ ಬಾವಿ ಬಳಿಗೆ ಧಾವಿಸಿದರಾದರೂ ಅಷ್ಟರಲ್ಲಿ ಅಜಯಕುಮಾರ್ ಸಾವನ್ನಪ್ಪಿದ್ದ ಎನ್ನಲಾಗಿದೆ. ಪ್ರಕರಣ ಸಂಬಂಧ ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿರುವುದಿಲ್ಲ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: