ಮೈಸೂರು

ರಂಗರಾವ್ ಸ್ಮಾರಕ ಶಾಲೆಗೆ ಸರಕಾರದಿಂದ ಪ್ರಶಸ್ತಿ

ಎನ್‌ಆರ್ ಫೌಂಡೇಶನ್‌ನ ರಂಗರಾವ್ ಸ್ಮಾರಕ ವಿಚೇತನರ ಶಾಲೆಯು ವಿಚೇತನರ ವಲಯದಲ್ಲಿ ನೀಡಿದ ಅಭೂತಪೂರ್ವ ಕೊಡುಗೆಯನ್ನು ಗುರುತಿಸಿ ವಿಶ್ವ ವಿಚೇತನರ ದಿನದಂದು ಪ್ರಶಸ್ತಿ ನೀಡಲಾಯಿತು.

ಕರ್ನಾಟಕ ಸರ್ಕಾರದಿಂದ ನೀಡಲಾಗುವ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಇತ್ತೀಚೆಗೆ ವಿಶೇಷ ಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ವಿಭಾಗವು ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಪ್ರದಾನ ಮಾಡಿತು.

ಎನ್‌ಆರ್ ಸಮೂಹದ ಅಧ್ಯಕ್ಷ ಗುರು ಅವರು ಮಾತನಾಡಿ, ನಾವು ಸಮಾಜ ಸೇವೆಯಲ್ಲಿ ಹೆಚ್ಚಿನ ನಂಬಿಕೆಯನ್ನು ಹೊಂದಿದವರಾಗಿದ್ದೇವೆ. ರಂಗರಾವ್ ಸ್ಮಾರಕ ವಿಚೇತನರ ಶಾಲೆಯ ಮೂಲಕ ಅಂಧ ಬಾಲಕಿಯರಿಗೆ ಶಿಕ್ಷಣದ ಜೊತೆಗೆ ಜೀವನ ಕೌಶಲವನ್ನು ಸಹ ನೀಡುತ್ತೇವೆ. ಜೊತೆಗೆ ಅವರಿಗೆ ಸ್ವತಂತ್ರ ಬದುಕನ್ನು ಕಲ್ಪಿಸುವುದರ ಮೂಲಕ ಮುಖ್ಯವಾಹಿನಿಗೆ ತರುವ ಗುರಿ ಹೊಂದಿದ್ದೇವೆ. ಕರ್ನಾಟಕ ಸರ್ಕಾರ ನಮ್ಮ ಸೇವೆಯನ್ನು ಗುರುತಿಸಿ ಗೌರವಿಸಿದ್ದಕ್ಕೆ ನಮಗೆ ತುಂಬಾ ಸಂತಸವಾಗಿದೆ. ಕ್ಷೇತ್ರದಲ್ಲಿ ಲಭ್ಯವಿರುವ ಅತ್ಯುನ್ನತ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಅಂಧ ಮಕ್ಕಳ ಜೀವನದಲ್ಲಿ ಮಹತ್ವದ ಬದಲಾವಣೆಯನ್ನು ತರಲು ಪ್ರಯತ್ನಿಸುತ್ತಿದ್ದೇವೆ. ಈ ಮೂಲಕ ಅಂಧ ವಿದ್ಯಾರ್ಥಿಗಳ ಭದ್ರ ಭವಿಷ್ಯಕ್ಕೆ ಬುನಾದಿಯನ್ನು ಹಾಕುವ ಉದ್ದೇಶ ನಮ್ಮದಾಗಿದೆ ಎಂದರು.

ಆರ್ಥಿಕವಾಗಿ ಹಿಂದುಳಿದ ಕೌಟುಂಬಿಕ ಹಿನ್ನೆಲೆಯಿರುವ ಬಾಲಕಿಯರಿಗೆ ರಂಗರಾವ್ ಸ್ಮಾರಕ ವಿಚೇತನರ ಶಾಲೆಯು ಉಚಿತ ವಸತಿ ಶಾಲೆಯ ಸೌಲಭ್ಯವನ್ನು ಕಲ್ಪಿಸಿದೆ. ವಿದ್ಯಾರ್ಥಿಗಳಿಗೆ ತಮ್ಮ ಬದುಕನ್ನು ತಾವೇ ಕಟ್ಟಿಕೊಳ್ಳುವ ವಿಶ್ವಾಸವನ್ನು ತುಂಬುವ ಕೆಲಸವನ್ನು ಮಾಡುತ್ತಿದೆ. ಪ್ರಸ್ತುತ ಇಲ್ಲಿ 100 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಕಳೆದ 29 ವರ್ಷಗಳಿಂದ ಶಿಕ್ಷಕ ಹಾಗೂ ಶಿಕ್ಷಕೇತರ ಮತ್ತು ರಂಗ ಕುಟುಂಬದ ಸದಸ್ಯರು ಅವರ ಸೇವೆಗೆ ಬದ್ಧರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಶಾಲೆಯಲ್ಲಿ ಶಿಕ್ಷಣ ಪಡೆದು ಹೊರ ಹೋದ ವಿದ್ಯಾರ್ಥಿಗಳು ಈಗ ವಿವಿಧ ಸರ್ಕಾರಿ/ಖಾಸಗಿ ಸಂಸ್ಥೆಗಳಲ್ಲಿ ಗೌರವದ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

Leave a Reply

comments

Related Articles

error: