
ಕರ್ನಾಟಕಪ್ರಮುಖ ಸುದ್ದಿ
ಕುಮಾರಸ್ವಾಮಿ ಕಾಂಗ್ರೆಸ್ ಸೇರಿಕೊಳ್ಳುವುದು ಉತ್ತಮ: ಸಂಸದ ಸುರೇಶ್ ಅಂಗಡಿ ಪುಕ್ಕಟೆ ಸಲಹೆ
ಬೆಳಗಾವಿ (ಜೂನ್ 6): ಜೆಡಿಎಸ್ ಪಕ್ಷದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಕಾಂಗ್ರೆಸ್ ಸೇರಿಕೊಳ್ಳುವುದು ಉತ್ತಮ ಎಂದು ಬಿಜೆಪಿ ಸಂಸದ ಸುರೇಶ್ ಅಂಗಡಿ ಅವರು ಪುಕ್ಕಟೆ ಸಲಹೆ ನೀಡಿದ್ದಾರೆ.
ಜನ ಈ ಬಾರಿ ಯಾವ ಪಕ್ಷಕ್ಕೂ ಬಹುಮತ ನೀಡಿಲ್ಲ. ಆದರೆ ಚುನಾವಣೆಯಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ. ಆದರೂ ನಾವು ವಿರೋಧ ಪಕ್ಷದಲ್ಲಿ ಕುಳಿತು ಸೇವೆಯನ್ನು ಮಾಡುತ್ತೇವೆ ಎಂದು ಹೇಳಿದರು.
ಇದೇ ವೇಳೆ “ಹಿಂದಿನ ಬ್ರಿಟಿಷ್ ಕಂಪನಿಯನ್ನು ನಂಬಬಹುದಿತ್ತು. ಆದರೆ ಇಂದಿನ ಕಾಂಗ್ರೆಸ್ ಸರ್ಕಾರ ಮತ್ತು ನಾಯಕರನ್ನು ನಂಬಲಿಕ್ಕೆ ಆಗಲ್ಲ. ಇಂದು ಕುಮಾರಸ್ವಾಮಿ ಅವರು ದೈವಬಲದಿಂದ ಸಿಎಂ ಆಗಿದ್ದಾರೆ. ಚುನಾವಣೆ ಫಲಿತಾಂಶದ ಬಳಿಕ ಕಾಂಗ್ರೆಸ್ ಷರತ್ತು ರಹಿತ ಬೆಂಬಲ ನೀಡಿದ್ದೇವೆ ಎಂದು ಜೆಡಿಎಸ್ ಗೆ ಹೇಳಿದ್ರು, ಇಂದು ಒಂದಾದ ನಂತರ ಒಂದು ಷರತ್ತುಗಳನ್ನು ಹಾಕುತ್ತಿದ್ದಾರೆ” ಎಂದು ಕಾಂಗ್ರೆಸ್ ವಿರುದ್ಧ ಅವರು ವಾಗ್ದಾಳಿ ನಡೆಸಿದ್ದಾರೆ. (ಎನ್.ಬಿ)