ಮೈಸೂರು

ಮೈಸೂರು ಅರಮನೆಗೆ ಭೇಟಿ ನೀಡಿದ ಸುಷ್ಮಾ ಸ್ವರಾಜ್ ಪುತ್ರಿ

ಮೈಸೂರು,ಜೂ.4-ಸಾಂಸ್ಕೃತಿಕ ನಗರಿ ಮೈಸೂರಿಗೆ ಆಗಮಿಸಿರುವ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಮಗಳು ಬನ್ಸೂರಿ ಸ್ವರಾಜ್ ತಮ್ಮ ಸ್ನೇಹಿತರೊಂದಿಗೆ ಅರಮನೆಗೆ ಭೇಟಿ ನೀಡಿ ಅರಮನೆಯ ಸೊಬಗನ್ನು ಕಣ್ತುಂಬಿಕೊಂಡರು.

ಭಾನುವಾರ ಅರಮನೆ, ಮೃಗಾಲಯ ಸೇರಿದಂತೆ ಮೈಸೂರಿನ ಅನೇಕ ಪ್ರೇಕ್ಷಣಿಯ ಸ್ಥಳಗಳಿಗೆ ಬನ್ಸೂರಿ ಭೇಟಿ ನೀಡಿ ಸಂತಸ ಪಟ್ಟರು. ಈ ವೇಳೆ ಸಂಸದ ಪ್ರತಾಪಸಿಂಹ ಜತೆಗಿದ್ದು, ಬನ್ಸೂರಿ ಅವರಿಗೆ ಮೈಸೂರು ದರ್ಶನ ಮಾಡಿಸುವ ಜತೆಗೆ ಒಡೆಯರ್ ಮನೆತನದ ಇತಿಹಾಸವನ್ನು ಕೂಡ ಪರಿಚಯಿಸಿದ್ದಾರೆ.

ಅರಮನೆಯು ವಿದ್ಯುದ್ದೀಪದಿಂದ ಅಲಂಕಾರ ಆಗುತ್ತಿದ್ದಂತೆ ಸಂತಸಗೊಂಡ ಕ್ಷಣವನ್ನು ಸಂಸದ ಪ್ರತಾಪ್ ಸಿಂಹ ಕೆಲ ನಿಮಿಷ ಫೇಸ್ ಬುಕ್ ಲೈವ್ ಬಂದು, ಬನ್ಸೂರಿ ಸ್ವರಾಜ್ ಮತ್ತು ತಮ್ಮ ಮಗಳೊಂದಿಗೆ ಅರಮನೆಯ ವಿದ್ಯುತ್ ದೀಪಾಲಂಕಾರ ವೀಕ್ಷಣೆ ಮಾಡುತ್ತಿರುವುದಾಗಿ ತಿಳಿಸಿದರು. (ಎಂ.ಎನ್)

Leave a Reply

comments

Related Articles

error: