ಮೈಸೂರು

ಮಾಹಿತಿ ಮತ್ತು ಸಂಪರ್ಕ ತಂತ್ರಜ್ಞಾನದ ಕುರಿತು ಒಂದು ದಿನದ ಕಾರ್ಯಾಗಾರ

ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ (ಎಐಐಎಸ್ಎಚ್) ಮೈಸೂರು ಇವರ ವತಿಯಿಂದ ‘ಮಾಹಿತಿ ಮತ್ತು ಸಂಪರ್ಕ ತಂತ್ರಜ್ಞಾನ’ದ ಕುರಿತು ಒಂದು ದಿನದ ಕಾರ್ಯಾಗಾರವನ್ನು ಶನಿವಾರ ಏರ್ಪಡಿಸಲಾಗಿತ್ತು.

ಸಂಸ್ಥೆಯ ಆವರಣದಲ್ಲಿ ನಡೆದ ಈ ಕಾರ್ಯಕ್ರಮವನ್ನು ಎಐಐಎಸ್ಎಚ್ ವಿದ್ಯುನ್ಮಾನ ವಿಭಾಗ ಆಯೋಜಿಸಿತ್ತು. ಮಾಹಿತಿ ಮತ್ತು ಸಂಪರ್ಕ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆ ಕುರಿತು ಮಾಹಿತಿ ಒದಗಿಸುವುದು, ಅಂತರ-ಸಂಪರ್ಕ ಸಂಬಂಧಿತ ಆವಿಷ್ಕಾರಕ್ಕೆ ಉತ್ತೇಜನ ನೀಡುವುದು ಈ ಕಾರ್ಯಾಗಾರದ ಪ್ರಮುಖ ಉದ್ದೇಶ.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಆರ್‍ಟಿಟಿಸಿ ಪ್ರಾಂಶುಪಾಲ ಎ.ವಿ. ಶ್ರೀಕಂಠನ್ ಅವರು, ಪ್ರಸ್ತುತ ಅಂತರ-ಸಂಪರ್ಕ ತಂತ್ರಜ್ಞಾನವು ಸಮಾಜದ ಎಲ್ಲ ಕ್ಷೇತ್ರಗಳನ್ನೂ ಆವರಿಸುತ್ತಿದೆ. ಉನ್ನತ ಶಿಕ್ಷಣ ಮತ್ತು ವೈದ್ಯಕೀಯ ಸೇವೆಗಳನ್ನು ಒದಗಿಸುವಲ್ಲಿ ಸಂಪರ್ಕ ತಂತ್ರಜ್ಞಾನದ ಪಾತ್ರ ಮಹತ್ವವಾದದ್ದು. ಅಂತರ-ಸಂಪರ್ಕ ಸಂಬಂಧಿತ ಆವಿಷ್ಕಾರವು ಮುಂದಿನ ದಿನಗಳಲ್ಲಿ ಬೇಡಿಕೆಯ ಕ್ಷೇತ್ರವಾಗಲಿದ್ದು, ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಬಹುದಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಐಐಎಚ್‍ನ ಮಾಹಿತಿ ಮತ್ತು ಸಂಪರ್ಕ ವಿಭಾಗದ ನಿರ್ದೇಶಕಿ ಡಾ. ಆಶಾ ಯತಿರಾಜ್ ಅವರು ಮಾತನಾಡಿ, ವಾಕ್ ಮತ್ತು ಶ್ರವಣ ಸಂಬಂಧಿ ಸಮಸ್ಯೆಗಳ ನಿವಾರಣೆಗೆ ತಂತ್ರಜ್ಞಾನದ ನೆರವು ಅತ್ಯಗತ್ಯವಾಗಿದ್ದು, ಈ ಸಂಬಂಧಿತ ಆವಿಷ್ಕಾರಗಳತ್ತ ವಿದ್ಯಾರ್ಥಿಗಳು ಗಮನಹರಿಸಬೇಕು ಎಂದರು.

Leave a Reply

comments

Related Articles

error: