ಮೈಸೂರು

ಮೈಸೂರಿನ ಹೆಸರನ್ನು ವಿಶ್ವ ಭೂಪಟದಲ್ಲಿ ಗುರುತಿಸುವಂತೆ ಮಾಡಿದ ಮಹಾನ್ ಚೇತನ ನಾಲ್ವಡಿ ಕೃಷ್ಣರಾಜ ಒಡೆಯರ್ : ಎಂಡಿ.ಪಾರ್ಥಸಾರಥಿ

ಮೈಸೂರು,ಜೂ.4:- ಆಧುನಿಕ ಮೈಸೂರಿನ ನಿರ್ಮಾತೃ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ 134 ನೇ ಜಯಂತಿ ಮತ್ತು ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಅಗ್ರಹಾರದ ಬಿಬಿ ಲಾಯದಲ್ಲಿರುವ  ಶ್ರೀ ಕೃಷ್ಣರಾಜ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿವಿಧ ಜಾತಿಯ ಫಲ ಕೊಡುವ ಸಸಿ ನೆಡುವ ಮೂಲಕ ವಿಶೇಷ ವಾಗಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಮಾಜಿ ಮಹಾನಗರ ಪಾಲಿಕೆ ಸದಸ್ಯ ಎಂಡಿ.ಪಾರ್ಥಸಾರಥಿ ಮಾತನಾಡಿ  ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರು ಆಧುನಿಕ ಮೈಸೂರಿನ ನಿರ್ಮಾಣದಲ್ಲಿ ವಿವಿಧ ಅಭಿವೃದ್ಧಿಗಳಾದ ರಸ್ತೆ,ಆಸ್ಪತ್ರೆ,ನೀರಾವರಿ,ಶಿಕ್ಷಣ ಸಂಸ್ಥೆ ಗಳು, ಧಾರ್ಮಿಕ ಸಂಸ್ಥೆ ಗಳು, ಸಂಶೋಧನಾ ಕೇಂದ್ರಗಳು, ವಿದ್ಯುತ್ ಉತ್ಪಾದನೆ, ಕಾರ್ಖಾನೆಗಳನ್ನು ಸ್ಥಾಪಿಸಿ ಮೈಸೂರಿನ ಹೆಸರನ್ನು ವಿಶ್ವ ಭೂಪಟದಲ್ಲಿ ಗುರುತಿಸುವಂತೆ ಮಾಡಿದ ಮಹಾನ್ ಚೇತನ ಎಂದು ಅವರ ಯೋಜನೆಗಳನ್ನು ಶಾಲಾ ಮಕ್ಕಳಿಗೆ ಸವಿವರವಾಗಿ ತಿಳಿಸಿದರು. ನಂತರ ಮಾತನಾಡಿದ ಕೆಎಂಪಿಕೆ ಚಾರಿಟಬಲ್ ಅಧ್ಯಕ್ಷ ವಿಕ್ರಮ್ ಅಯ್ಯಂಗಾರ್ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜಯಂತಿಯನ್ನು ರಾಜ್ಯಸರ್ಕಾರ  ರಾಜ್ಯಮಟ್ಟದಲ್ಲಿ ಆಚರಿಸದಿರುವುದು ವಿಷಾದನೀಯ. ಅವರ ಕೊಡುಗೆಗಳು ಇಂದಿಗೂ ಪ್ರಸ್ತುತ ವಾಗಿರುವುದರಿಂದ ಮೈಸೂರಿನ ಕೃಷ್ಣರಾಜ ವೃತ್ತದಲ್ಲಿ ಅವರ ಕೊಡುಗೆಗಳನ್ನು ಶಾಶ್ವತವಾಗಿ ಪ್ರಸಾರವಾಗುವಂತೆ ಮಾಡಬೇಕು.  ಕೃಷ್ಣರಾಜ ಒಡೆಯರ್ ಅವರ ಯೋಜನೆಗಳ ಫಲಾನುಭವಿಗಳು ಅವರನ್ನು ನೆನೆಯದಿರುವುದು ಖೇದಕರ ಸಂಗತಿ ಎಂದು ಹೇಳಿದರು.

ಆ ನಂತರ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ  ಶಿಕ್ಷಣ ಇಲಾಖೆಯು ಮಗುವಿಗೊಂದು ಮರ , ಶಾಲೆಗೊಂದು ವನ ಯೋಜನೆಗೆ ಚಾಲನೆ ನೀಡುತ್ತಿರುವುದು ಪ್ರಶಂಸನೀಯ.  ಹೀಗೆಯೇ ರಾಜ್ಯದ ಪ್ರತಿಯೊಂದು ಶಾಲೆಯಲ್ಲೂ ಪರಿಸರ ಕೂಟದ ರಚನೆ ಮಾಡುವುದು ಕೂಡ ಅತ್ಯಗತ್ಯವಾಗಿದೆ. ಮಕ್ಕಳಲ್ಲಿ ಗಿಡ ಮರಗಳ ಬಗ್ಗೆ ಆಸಕ್ತಿ ಮೂಡಿಸುವುದು ರಾಜ್ಯದಲ್ಲಿ ಒಂದಷ್ಟು ಅರಣ್ಯ ಬೆಳೆಸುವಲ್ಲಿ ಉಪಯೋಗವಾಗಲಿದೆ. ಹಾಗಾಗಿ ಶಿಕ್ಷಣ ಇಲಾಖೆ ಮಕ್ಕಳಲ್ಲಿ ಇನ್ನಷ್ಟು ಜಾಗೃತಿಯನ್ನು ಮೂಡಿಸಿ ಈ ನಿಟ್ಟಿನಲ್ಲಿ ಯಶಸ್ವಿಯಾಗಲಿ ಎಂದರು. ಮಕ್ಕಳಿಗೆ ಪರಿಸರ ಪ್ರಜ್ಞೆ ಯ ಬಗ್ಗೆ ಮಾಹಿತಿ ನೀಡಲಾಯಿತು. ಶಾಲೆಯ  ಮುಖ್ಯೋಪಾಧ್ಯಾಯ ರಾದ ಸುಬ್ಬೇಗೌಡ, ಶಿಕ್ಷಕಿಯರಾದ ಲಕ್ಷ್ಮಿ , ಸುಮಾ ಹಾಗೂ ಕೆಎಂಪಿಕೆ ಟ್ರಸ್ಟ್ ನ ಪದಾಧಿಕಾರಿಗಳಾದ ರಂಗನಾಥ್,ಜಯಸಿಂಹ,ಸಂದೇಶ್,ಶ್ರೀಕಾಂತ್ ಕಶ್ಯಪ್,ಕಡಕೊಳ ಜಗದೀಶ್ ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: