
ಕರ್ನಾಟಕ
ಗಾಂಜಾ ಮಾರಾಟ : ಬಂಧನ
ರಾಜ್ಯ(ಬೆಂಗಳೂರು)ಜೂ.4:- ಸಂಪಿಗೆಹಳ್ಳಿಯ ಶ್ರೀರಾಂಪುರ ಬಳಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ನಾಗಶೆಟ್ಟಿಹಳ್ಳಿಯ ಮೊಹಮ್ಮದ್ ಅಲಿ(64)ಎಂಬಾತನನ್ನು ಬಂಧಿಸಿರುವ ಸಂಪಿಗೆಹಳ್ಳಿ ಪೊಲೀಸರು 310ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಯು ಬೇರೆ ಕಡೆಯಿಂದ ಗಾಂಜಾ ತಂದು ಚಿಕ್ಕ ಪ್ಯಾಕೆಟ್ಗಳಾಗಿ ಕಟ್ಟಿ ಮಾರಾಟ ಮಾಡುತ್ತಿದ್ದು ಖಚಿತ ಮಾಹಿತಿ ಆಧರಿಸಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)