ಮೈಸೂರು

ತಬಲಾ ವಾದಕ ಪಂಡಿತ್ ಗೋಪಾಲ್ ಹೆಗಡೆ ಅವರಿಗೆ ಕೆ.ಎಸ್.ಹಡಪದ ಪ್ರಶಸ್ತಿ ಪ್ರದಾನ

ಮೈಸೂರು,ಜೂ.4:- ಖ್ಯಾತ ತಬಲಾ ವಾದಕ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಪಂಡಿತ್ ಗೋಪಾಲ್ ಹೆಗಡೆ ಅವರಿಗೆ ಪಂಡಿತ್ ಕೆ.ಎಸ್.ಹಡಪದ ಪ್ರಶಸ್ತಿ ಪ್ರದಾನಿಸಿ ಗೌರವಿಸಲಾಯಿತು.

ನಗರದ ನಾದಬ್ರಹ್ಮಾ ಸಂಗೀತ ಸಭಾದಲ್ಲಿ ಶ್ರೀಗುರು ಪುಟ್ಟರಾಜ ಸಂಗೀತ ಸಭಾ ವತಿಯಿಂದ ನಿನ್ನೆ ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಫಲಕ ನೀಡಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಸಂಗೀತ ಕಲಿಸಲು ಮುಂದಾಗಬೇಕು. ಸಂಗೀತದಿಂದ ಪ್ರತಿಯೊಬ್ಬರಲ್ಲೂ ಸಂಸ್ಕಾರ ಬರುತ್ತದೆ ಎಂದು ತಿಳಿಸಿದರು. ಕಾರ್ಯಕ್ರಮವನ್ನು ಬೆಮಗಳೂರಿನ ಸಪ್ತಕ ಸಂಚಾಲಕ ಜಿ.ಎಸ್.ಹೆಗಡೆ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಸಂಗೀತ ಸಭಾದ ಗೌರವಾಧ್ಯಕ್ಷ, ಪಾಲಿಕೆ ಸದಸ್ಯ ಮಾ.ವಿ.ರಾಂ ಪ್ರಸಾದ್, ಅಧ್ಯಕ್ಷ ಭೀಮಾಶಂಕರ್ ಬಿದನೂರು, ಪತ್ರಕರ್ತ ಬಸವರಾಜ ಜಿ.ಹಡಪದ ಉಪಸ್ಥಿತರಿದ್ದರು. (ಎಸ್.ಎಚ್)

Leave a Reply

comments

Related Articles

error: