ಕ್ರೀಡೆ

ಏಷ್ಯಾ ಕಪ್ ಟಿ20: ಥಾಯ್ಲೆಂಟ್ ವಿರುದ್ಧ ಟೀಂ ಇಂಡಿಯಾಗೆ 66 ರನ್ ಗಳ ಜಯ

ಕೌಲಲಾಂಪುರ,ಜೂ.4-ಏಷ್ಯಾ ಕಪ್ ಟಿ20 ಟೂರ್ನಿಯಲ್ಲಿ ಟೀಂ ಇಂಡಿಯಾ ಮಹಿಳಾ ತಂಡ ಸತತ ಎರಡನೇ ಗೆಲುವು ಸಾಧಿಸಿದೆ.

ಹರ್ಮನ್ ಪ್ರೀತ್ ಕೌರ್ ಅವರ ಆಲ್ ರೌಂಡರ್ ಆಟದಿಂದಾಗಿ ಟೀ ಇಂಡಿಯಾ ಥಾಯ್ಲೆಂಟ್ ವಿರುದ್ಧ 66 ರನ್ ಗಳಿಂದ ಜಯಸಾಧಿಸಿದೆ.

ಮೊದಲು ಬ್ಯಾಟ್ ಮಾಡಿದ ಭಾರತ ಮಹಿಳಾ ತಂಡ ನಿಗದಿತ ಓವರ್ ನಲ್ಲಿ 4 ವಿಕೆಟ್ ನಷ್ಟಕ್ಕೆ 132 ರನ್ ಗಳಿಸಿತ್ತು. 133 ರನ್ ಗಳ ಗುರಿ ಪಡೆದ ಥಾಯ್ಲೆಂಡ್ ನಿಗದಿತ ಓವರ್ ನಲ್ಲಿ 8 ವಿಕೆಟ್ ನಷ್ಟಕ್ಕೆ ಕೇವಲ 66 ರನ್ ಪೇರಿಸಲಷ್ಟೆ ಸಾಧ್ಯವಾಯಿತು. ಇದರೊಂದಿಗೆ ಭಾರತಕ್ಕೆ 66 ರನ್ ಗಳ ಜಯ ಸಿಕ್ಕಿತು.

ಭಾರತ ಪರ ಮೇಶ್ರಂ 32, ಸ್ಮೃತಿ ಮಂದಾನ 29, ಹರ್ಮನ್ ಪ್ರೀತ್ ಕೌರ್ 27 ರನ್ ಸಿಡಿಸಿದ್ದಾರೆ. ಥಾಯ್ಲೆಂಡ್ ಪರ ಚಾಯ್ ವಾಯ್ 14, ಬೂಚಾಥಮ್ 21 ಮತ್ತು ಸುತಿರುವಾಂಗ್ 12 ರನ್ ಬಾರಿಸಿದ್ದಾರೆ. ಮಲೇಷ್ಯಾ ವಿರುದ್ಧ ನಡೆದ ಮೊದಲ ಪಂದ್ಯದಲ್ಲೂ ಟೀ ಇಂಡಿಯಾ 142 ರನ್ ಗಳ ಜಯ ಸಾಧಿಸಿತ್ತು. (ಎಂ.ಎನ್)

Leave a Reply

comments

Related Articles

error: