ದೇಶ

ಪರೀಕ್ಷಾ ನಿಯಮಗಳನ್ನು ಕೊಂಚ ಸಡಿಲಿಸಬೇಕು ಎಂದು ಡೆತ್​ ನೋಟ್​ ಬರೆದು ಯುವಕ ಆತ್ಮಹತ್ಯೆ

ನವದೆಹಲಿ.ಜೂ 04 : ಯುಪಿಎಸ್​ಸಿ ಪರೀಕ್ಷೆ ಬರೆಯಲು ಅವಕಾಶ ನೀಡಲಿಲ್ಲವೆಂದು ಮನನೊಂದ ಪರೀಕ್ಷಾ ಅಭ್ಯರ್ಥಿ ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿರುವ ಘಟನೆ ನಡೆದಿದೆ.

ಆತ್ಮಹತ್ಯೆಗೆ ಶರಣಾದ ಯುವಕ ವರುಣ್ ಎಂದು ಗುರುತಿಸಲಾಗಿದೆ. ನಿನ್ನೆ  ರಾಷ್ಟ್ರದ್ಯಾಂತ ಯುಪಿಎಸ್​ಸಿ ಪೂರ್ವಭಾವಿ​ ಪರೀಕ್ಷೆಯನ್ನು ನಡೆಸಿತ್ತು. ಈ ವೇಳೆ ಪರೀಕ್ಷಾ ಕೇಂದ್ರಕ್ಕೆ ತಡವಾಗಿ ಬಂದ ವರುಣ್​ ಎಂಬ ಅಭ್ಯರ್ಥಿಗೆ ಪರೀಕ್ಷಾ ಕೊಠಡಿ ಪ್ರವೇಶಕ್ಕೆ ನಿರಾಕರಣೆ ಮಾಡಲಾಗಿತ್ತು. ಈ ವೇಳೆ ನವದೆಹಲಿಯ ಪಹರ್ಗಂಜ್​ನಲ್ಲಿ ಪರೀಕ್ಷಾ ಕೇಂದ್ರದಿಂದ ತೆರಳಿದ ವರುಣ್,  ಯುಪಿಎಸ್​ಸಿ ಪರೀಕ್ಷಾ ನಿಯಮದ ಪ್ರಕಾರ ಹತ್ತು ನಿಮಿಷ ಮೊದಲೇ ಹಾಜರಿರಬೇಕು. ತಡವಾಗಿ ಬಂದ ಅಭ್ಯರ್ಥಿಗಳಿಗೆ ಪರೀಕ್ಷೆ ಕೊಠಡಿಗೆ ಪ್ರವೇಶವಿಲ್ಲ. ಪರೀಕ್ಷೆಯೂ ಎರಡು ಪತ್ರಿಕೆಗಳನ್ನು ಒಳಗೊಂಡಿದ್ದು ಬೆಳ್ಳಗ್ಗೆ 9.20ಕ್ಕೆ ಹಾಗೂ ಮಧ್ಯಾಹ್ನ 2.20ರೊಳಗೆ ಕೊಠಡಿಯೊಳಗೆ  ಹಾಜರಿರತಕ್ಕದು ಎಂದು ಆಯೋಗ ನಿಯಮ ವಿಧಿಸಿದೆ. ಪರೀಕ್ಷಾ ನಿಯಮಗಳನ್ನು ಕೊಂಚ ಸಡಿಲಿಸಬೇಕು ಎಂದು ಡೆತ್​ ನೋಟ್​ ಬರೆದು ಆತ ವಾಸವಿದ್ದ ರೂಮ್​ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. (ಪಿ.ಎಸ್ )

Leave a Reply

comments

Related Articles

error: