ಮೈಸೂರು

ಬೆಳೆಗಳಿಗೆ ನೀರು ಹರಿಸಲು ಆಗ್ರಹ: ಜೆಡಿಎಸ್‍ನಿಂದ ಪ್ರತಿಭಟನೆ

ಹಾರಂಗಿ ಜಲಾಶಯದಿಂದ ನಾಲೆಗಳ ಮುಖಾಂತರ ಬೆಳೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ ಜಿಲ್ಲಾ ಜೆಡಿಎಸ್ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಯಿತು.

ಹಾರಂಗಿ ಜಲಾಶಯದ ವ್ಯಾಪ್ತಿಯಲ್ಲಿ ಬೆಳೆದು ನಿಂತಿರುವ ಬೆಳೆಗಳಿಗೆ ನೀರು ಬಿಡದಿರುವ ಕಾರಣ ಬೆಳೆಗಳು ಒಣಗುತ್ತಿದ್ದು, ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. 5 ದಿನಗಳ ಮಟ್ಟಿಗೆ ನೀರು ಹರಿಸಿದಲ್ಲಿ ರೈತರು ಬೆಳೆ ನಷ್ಟದಿಂದ ಪಾರಾಗುತ್ತಾರೆ.

1.16379 ಟಿಎಂಸಿ ನೀರನ್ನು ಸರಕಾರದ ನಿರ್ಣಯದಂತೆ ಕುಡಿಯುವ ನೀರಿನ ಉದ್ದೇಶಕ್ಕಾಗಿ ಮೀಸಲಿಡಲಾಗುವುದು ಎಂದು ಹಾರಂಗಿ ಜಲಾಶಯದ ಅಧೀಕ್ಷಕರ ಇಂಜಿನಿಯರ್ ಮಾಹಿತಿ ನೀಡಿದ್ದಾರೆ. ಅದರಂತೆ, ತಕ್ಷಣ ನಾಲೆಗಳ ಮುಖಾಂತರ ಪ್ರತಿದಿನಕ್ಕೆ 100 ಕ್ಯೂಸೆಕ್ಸ್‍ನಂತೆ ಐದು ದಿನಗಳ ಕಾಲ ನೀರು ಹರಿಸಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ. ಇಲ್ಲವಾದಲ್ಲಿ ನಷ್ಟಕ್ಕೆ ಒಳಗಾಗಿರುವ ಬೆಳೆಗಳಿಗೆ ಪ್ರತಿ ಎಕರೆಗೆ 25,000 ರೂ.ಗಳಂತೆ ಪರಿಹಾರ ನೀಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಶಾಸಕ ಸಾ.ರಾ. ಮಹೇಶ್, ಮಾಜಿ ಮೇಯರ್‍ಗಳಾದ ಬಿ.ಎಲ್. ಭೈರಪ್ಪ, ಲಿಂಗಪ್ಪ, ನಗರಾಧ್ಯಕ್ಷ ರಾಜಣ್ಣ, ಮಂಜು, ನಗರ ಪಾಲಿಕೆ ಸದಸ್ಯ ಸಂದೇಶಸ್ವಾಮಿ, ಬಸವರಾಜು ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: