ಮೈಸೂರು

ಜೂ.6ರಂದು ಮಾಜಿ ಸಿಎಂ ದಿ.ದೇವರಾಜ ಅರಸ್ ಅವರ 36ನೇ ಪುಣ್ಯಸ್ಮರಣೆ

ಮೈಸೂರು,ಜೂ.4 : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಅರಸು ಜಾಗೃತಿ ಅಕಾಡೆಮಿ ಸಂಯುಕ್ತವಾಗಿ ಮಾಜಿ ಮುಖ್ಯಮಂತ್ರಿ ದಿ.ದೇವರಾಜ ಅರಸ್ ಅವರ 36ನೇ ಪುಣ್ಯ ಸ್ಮರಣೆಯನ್ನು ಜೂ.6ರ ಸಂಜೆ 5ಕ್ಕೆ ಅರಮನೆ ಉತ್ತರದ್ವಾರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಆಯೋಜಿಸಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿಶ್ರಾಂತ ನಿರ್ದೇಶಕ ಡಾ.ಡಿ.ತಿಮ್ಮಯ್ಯ ಉದ್ಘಾಟಿಸುವರು, ದೇವರಾಜೇ ಅರಸ್ ಬಿದುರುವನ ಅಧ್ಯಕ್ಷ ಎ.ಸಿ.ಲಕ್ಷ್ಮಣ್ ಇರುವರು. ಜಿಕಸಾಪ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ಅಧ್ಯಕ್ಷತೆ ವಹಿಸುವರು.

ಕಾರ್ಯಕ್ರಮದಲ್ಲಿ ಸಂಧ್ಯಾ ಸುರಕ್ಷಾ ಟ್ರಸ್ಟ್ ಅಧ್ಯಕ್ಷ ಬಿ.ಆರ್.ನಟರಾಜ್ ಜೋಯ್ಸ್, ಜಿ.ಶಸಾಪ ಅಧ್ಯಕ್ಷ ಎಂ.ಚಂದ್ರಶೇಖರ್, ಅರಸು ಜಾಗೃತಿ ಅಕಾಡೆಮಿ ಗೌರವಾಧ್ಯಕ್ಷ ಡಾ.ಎಂ.ಜಿ.ಆರ್.ಅರಸ್ ಇರುವರು. (ಕೆ.ಎಂ.ಆರ್)

Leave a Reply

comments

Related Articles

error: