ಮೈಸೂರು

ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಸ್ವಚ್ಛ ಕಾವೇರಿ ಹಾಗೂ ಸ್ವಚ್ಛ ಪರಿಸರಕ್ಕಾಗಿ ಕಾಲ್ನಡಿಗೆ ಜಾಥಾಕ್ಕೆ ಚಾಲನೆ

ಮೈಸೂರು,ಜೂ.5:- ಮೈಸೂರು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಪ್ರಾದೇಶಿಕ ಕಚೇರಿ, ಪುರಸಭೆ ಶ್ರೀರಂಗಪಟ್ಟಣ, ಶಾಶ್ವತಿ ಧಾರ್ಮಿಕ ಕ್ರಿಯಾ ಕೇಂದ್ರ, ಅಖಿಲ ಭಾರತೀಯ ಸನ್ಯಾಸಿ ಸಂಘ, ಕಾವೇರಿ ರಿವರ್ ವಾಟರ್ ಪ್ರೊಟೆಕ್ಷನ್ ಟ್ರಸ್ಟ್ ಹೊಗೇನಕಲ್ ಸಹಯೋಗದೊಂದಿಗೆ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಸ್ವಚ್ಛ ಕಾವೇರಿ ಹಾಗೂ ಸ್ವಚ್ಛ ಪರಿಸರಕ್ಕಾಗಿ ಕಾಲ್ನಡಿಗೆ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು.

ಇಂದು ಮೈಸೂರು ಅರಮನೆ  ಬಳಿಯಿಂದ ಶ್ರೀರಂಗಪಟ್ಟಣ ಶ್ರೀ ರಂಗನಾಥ ದೇವಾಲಯ ಸಮೀಪ ಕಾವೇರಿ ನದಿ ತಟದ ತನಕ ಕಾಲ್ನಡಿಗೆ ಜಾಥಾ ನಡೆಯಲಿದ್ದು, ಜಾಥಾಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭ ಮಾತನಾಡಿದ ಶಾಶ್ವತಿ ಧಾರ್ಮಿಕ ಕ್ರಿಯಾ ಕೇಂದ್ರದ ಭಾನುಪ್ರಕಾಶ್ ಶರ್ಮಾ ಕಾವೇರಿ ನದಿ ಪವಿತ್ರವಾದದ್ದು ಅದನ್ನು ಸ್ವಚ್ಛತೆಗೊಳಿಸುವುದು ನಮ್ಮ ಕರ್ತವ್ಯ. ಪರಿಸರ ದಿನಾಚರಣೆಯಂದು ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಈ ಕಾಲ್ನಾಡಿಗೆ ಜಾಥಾಗೆ ಚಾಲನೆ ನೀಡಿದ್ದೇವೆ ಎಂದರು. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಹಿರಿಯ ಅಧಿಕಾರಿ ಉದಯ್ ಕುಮಾರ್ ಮಾತನಾಡಿ ಎಲ್ಲಾ ನದಿಗಳು ಕಲುಷಿತ ಗೊಳ್ಳುತ್ತಿದೆ.ಪ್ಲಾಸ್ಟಿಕ್ ಮುಕ್ತ ನದಿಗಳನ್ನಾಗಿ ಮಾಡಬೇಕು ಎಂದರು. ಬ್ರಾಹ್ಮಣ ಮಹಾ ಸಭಾದ ಅಧ್ಯಕ್ಷ ಡಿ.ಟಿ.ಪ್ರಕಾಶ್ ಮಾತನಾಡಿ ಗಂಗಾ ನದಿ ನೀರಿನ್ನು ಸ್ವಚ್ಛ ಮಾಡಿರುವ ರೀತಿಯಲ್ಲಿ ಕಾವೇರಿ ನದಿಯನ್ನು ಸ್ವಚ್ಛಗೊಳಿಸಲು ಯೋಜನೆ ರೂಪಿಸಬೇಕು. ಇದಕ್ಕೆ ಸಂಘ ಸಂಸ್ಥೆಗಳು ಕೈಜೋಡಿಸಬೇಕು ಎಂದು ತಿಳಿಸಿದರು. ಜಾಥಾದಲ್ಲಿ ನೂರಾರು ಮಂದಿ ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: