ಕರ್ನಾಟಕ

ಸಾವಯವ ಸಂತೆ : ಉತ್ಪನ್ನಗಳ ಭರ್ಜರಿ ಮಾರಾಟ

ರಾಜ್ಯ(ಹಾಸನ)ಜೂ.5;- ನಗರದ ಆರ್.ಸಿ. ರಸ್ತೆ ಬಳಿ ಇರುವ ಎನ್.ಸಿ.ಸಿ. ಕಛೇರಿ ಮುಂದೆ ಹಮ್ಮಿಕೊಳ್ಳಲಾಗಿದ್ದ ರೈತರಿಂದ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವ ಸಾವಯವ ಸಂತೆಯಲ್ಲಿ ರೈತರು ಬೆಳೆದ ಎಲ್ಲಾ ಉತ್ಪನ್ನಗಳು ಭರ್ಜರಿ ಮಾರಾಟವಾಗಿ ಸಾವಿರಾರು ರೂ.ಗಳ ವಹಿವಾಟು ನಡೆಯಿತು.

ಸ್ವದೇಶಿ ಜಾಗರಣ ಮಂಚ್, ಅವನಿ ಆರ್ಗಾನಿಕ್ ಮತ್ತು ಭಾರತೀಯ ಕಿಸಾನ್ ಸಂಘ ಜಂಟಿಯಾಗಿ ಆಯೋಜಿಸುತ್ತಿರುವ ಸಾವಯವ ಸಂತೆಯಲ್ಲಿ 50ಕ್ಕೂ ಹೆಚ್ಚು ರೈತರು ತಮ್ಮ ಸಾವಯವ ಬೆಳೆಗಳನ್ನು ತಂದು ಮಾರಾಟ ಮಾಡಿದರು. ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾದ ವ್ಯಾಪಾರ 9.30ಕ್ಕೆ ಬಹುತೇಕ ಖಾಲಿಯಾಗಿತ್ತು. ಜನತೆ ಸಂತೆಯಲ್ಲಿ ಪಾಲ್ಗೊಂಡು ಸಾವಯವ ತರಕಾರಿ,ಹಣ್ಣು-ಹಂಪಲುಗಳನ್ನು ಕೊಂಡು ಸಂಭ್ರಮಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: