
ಕರ್ನಾಟಕಪ್ರಮುಖ ಸುದ್ದಿ
ಶಿಕ್ಷಣ ಹಕ್ಕು ಸೀಟುಗಳು: ಮೂರನೇ ಸುತ್ತಿನ ಲಾಟರಿ ಆಯ್ಕೆ
ಬೆಂಗಳೂರು (ಜೂನ್ 5): 2018-19 ನೇ ಸಾಲಿನಲ್ಲಿ ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯಿದೆ-2009 ರ 02.06.2018 ರಂದು ಮೂರನೇ ಸುತ್ತಿನ ಲಾಟರಿಯನ್ನು ನಡೆಸಲಾಗಿದೆ.
3ನೇ ಸುತ್ತಿನಲ್ಲಿ 46279 ಸೀಟುಗಳು ಲಭ್ಯವಿದ್ದು, 108794 ಅರ್ಜಿಗಳನ್ನು ಲಾಟರಿ ಪ್ರಕ್ರಿಯೆಗೆ ಪರಿಗಣಿಸಲಾಗಿದೆ. ಈ ಪೈಕಿ 19123 ಸೀಟುಗಳನ್ನು ಹಂಚಿಕೆ ಮಾಡಲಾಗಿದೆ. ಸಂಬಂಧಿಸಿದ ಪೋಷಕರು / ಪಾಲಕರು ದಿನಾಂಕ:08.06.2018.ರೊಳಗಾಗಿ ಸಂಬಂಧಿಸಿದ ಶಾಲೆಗಳಲ್ಲಿ ದಾಖಲಾತಿ ಪಡೆದುಕೊಳ್ಳುವುದು. ನಿಗಧಿಪಡಿಸಿದ ದಿನಾಂಕದೊಳಗೆ ದಾಖಲಾತಿ ಮಾಡಿಕೊಳ್ಳದಿದ್ದಲ್ಲಿ ಸೀಟುಗಳು ತಂತಾನೆ ರದ್ದಾಗುವುದು.
2018-19 ನೇ ಸಾಲಿನಲ್ಲಿ ಅನುದಾನಿತ ಮತ್ತು ಅನುದಾನ ರಹಿತ ಒಟ್ಟು 14107. ಶಾಲೆಗಳಲ್ಲಿ 1521117 ಸೀಟುಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಒಟ್ಟು 238724 ಅರ್ಜಿಗಳನ್ನು ಸ್ವೀಕರಿಸಲಾಗಿತ್ತು. ದಿನಾಂಕ:20-04-2018ರಂದು ನಡೆದ ಮೊದಲ ಸುತ್ತಿನ ಲಾಟರಿಯಲ್ಲಿ 1,11,548 ಸೀಟುಗಳನ್ನು ಹಂಚಿಕೆ ಮಾಡಲಾಗಿತ್ತು. 40,569 ಸೀಟುಗಳಿಗೆ ಪೋಷಕರು ಆದ್ಯತೆ ನೀಡದ ಕಾರಣ ಹಂಚಿಕೆ ಮಾಡಲಾಗಿರುವುದಿಲ್ಲ.
ಮೊದಲ ಸುತ್ತಿನಲ್ಲಿ 97,768 ವಿದ್ಯಾರ್ಥಿಗಳು ದಾಖಲಾತಿಯಾಗಿರುತ್ತಾರೆ. ಹಂಚಿಕೆಯಾದ ಶಾಲೆಗಳಿಗೆ ಮಕ್ಕಳ ಪೋಷಕರು ದಾಖಲಿಸಲು ಆಸಕ್ತಿ ತೋರದೆ ಇರುವುದರಿಂದ 13,780 ಸೀಟುಗಳಿಗೆ ದಾಖಲಾತಿಯಾಗಿರುವುದಿಲ್ಲ.
ದಿನಾಂಕ: 24-04-2018 ರಂದು ನಡೆದ ಎರಡನೇ ಸುತ್ತಿನ ಲಾಟರಿಯಲ್ಲಿ 12954 ಸೀಟುಗಳನ್ನು ಹಂಚಿಕೆ ಮಾಡಲಾಗಿತ್ತು. 7652 ಮಕ್ಕಳು ದಾಖಲಾಗಿರುತ್ತಾರೆ. ಹಂಚಿಕೆಯಾದ ಶಾಲೆಗಳಿಗೆ ಮಕ್ಕಳ ಪೋಷಕರು ದಾಖಲಿಸಲು ಆಸಕ್ತಿ ತೋರದೆ ಇರುವುದರಿಂದ 5302 ಸೀಟುಗಳಿಗೆ ದಾಖಲಾತಿಯಾಗಿರುವುದಿಲ್ಲ.
3245 ಶಾಲೆಗಳಿಗೆ ಯಾರೂ ಅರ್ಜಿ ಸಲ್ಲಿಸದೇ ಇರುವುದರಿಂದ ಇಂತಹ ಶಾಲೆಗಳಲ್ಲಿ 18208 ಆರ.ಟಿ.ಇ. ಸೀಟುಗಳು ಖಾಲಿ ಇರುತ್ತವೆ. 1171 ಶಾಲೆಗಳಿಗೆ ಆರ್.ಟಿ.ಇ ಸೀಟುಗಳಿಗಿಂತ ಕಡಿಮೆ ಅರ್ಜಿ ಸಲ್ಲಿಸಿರುವುದರಿಂದ 8948 ಸೀಟುಗಳು ಖಾಲಿ ಇರುತ್ತವೆ. ಒಟ್ಟು 27156 ಸೀಟುಗಳು ಯಾರು ಅರ್ಜಿ ಸಲ್ಲಿಸದ (ಪೋಷಕರು ಇಚ್ಚಿಸದ) ಕಾರಣ ಹಂಚಿಕೆಯಾಗದೇ ಖಾಲಿ ಉಳಿದಿರುತ್ತವೆ ಎಂದು ನಿರ್ದೇಶಕರು (ಪ್ರಾಥಮಿಕ ಶಿಕ್ಷಣ) ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಎನ್.ಬಿ)