ಮೈಸೂರು

‘ಪ್ರಜಾರತ್ನ’ ಪ್ರಶಸ್ತಿ ಪ್ರದಾನ ಸಮಾರಂಭ ಡಿ.11ರಂದು

ಮೈಸೂರು ಯೋಗ ಶಾಲೆ, ಆರ್.ಆರ್. ಇವೆಂಟ್ ಪ್ಲಾನರ್ಸ್ ಮತ್ತು ಸುದ್ದಿವಾಹಿನಿ ಸಹಯೋಗದೊಂದಿಗೆ ಡಿ.11ರಂದು ಸಂಜೆ 6 ಗಂಟೆಗೆ ಗೋಕುಲಂ ನ ಸುದ್ದಿವಾಹಿನಿ ಪತ್ರಿಕೆ ಕಚೇರಿಯಲ್ಲಿ ಯೋಗಬ್ರಹ್ಮ ಯೋಗಾಚಾರ್ಯ ಡಾ.ಬಿ.ಕೆ.ಎಸ್. ಅಯ್ಯಂಗಾರ್ ಅವರ 98 ನೇ ಜನ್ಮದಿನ ಸಂಸ್ಮರಣಾರ್ಥ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಮಹನೀಯರಿಗೆ ‘ಪ್ರಜಾರತ್ನ’ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಏರ್ಪಡಿಸಲಾಗಿದೆ ಎಂದು ಮೈಸೂರು ಯೋಗ ಅಸೋಸಿಯೇಷನ್ ನ ಅಧ್ಯಕ್ಷ ಯೋಗಾ ಪ್ರಕಾಶ್ ಹೇಳಿದರು.

ನಗರದ ಪತ್ರಕರ್ತಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇಲುಕೋಟೆಯ ವಂಗೀಪುರ ಮಠದ ಶ್ರೀ ಇಳೈ ಆಳ್ವಾರ್ ಸ್ವಾಮೀಜಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಸಮರ್ಪಣಾ ಟ್ರಸ್ಟ್ ನ ಅಧ್ಯಕ್ಷ ಎನ್.ವಿ.ಪಣೀಶ್ ಅವರು ಉದ್ಘಾಟನೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪಾಲಿಕೆ ಸದಸ್ಯೆ ಚಿಕ್ಕಮಮ್ಮ ಬಸವರಾಜ್ ಮತ್ತು ಖ್ಯಾತ ಸ್ತ್ರೀ ರೋಗ ತಜ್ಞರಾದ ಡಾ.ಗೀತಾ ನಂದಕುಮಾರ್ ಉಪಸ್ಥಿತರಿರುತ್ತಾರೆ.

ಪ್ರಶಸ್ತಿಗೆ ಭಾಜನರಾದವರು:

ಧಾರ್ಮಿಕ ಕ್ಷೇತ್ರ-ಕೆ.ಎಸ್.ರಘುರಾಮಯ್ಯ ವಾಜಪೇಯಿ, ಸಾಹಿತ್ಯ ಕ್ಷೇತ್ರ-ಪುಷ್ಪ ಐಯ್ಯಂಗಾರ್, ಶಿಕ್ಷಣ ಕ್ಷೇತ್ರ- ಎ.ವೈದೇಹಿ, ವೈದ್ಯಕೀಯ ಕ್ಷೇತ್ರ- ಡಾ.ಶಿವನಂಜಪ್ಪ, ನಾಗರೀಕ ಸೇವಾ ಕ್ಷೇತ್ರ- ಬಿ.ವಿ.ಮಂಜುನಾಥ್, ಯೋಗಾ ಕ್ಷೇತ್ರ- ಬಿ.ಪಿ.ಮೂರ್ತಿ, ಸಾಮಾಜಿಕ ಕ್ಷೇತ್ರ- ಟಿ.ಗಿರೀಶ್ ಪ್ರಸಾದ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಎಸ್.ಆರ್.ಶಿವಕುಮಾರ್, ಪ್ರಮೀಳ ವೀರಭದ್ರ, ನಾಮ ಶ್ರೀನಿವಾಸ್ ಮತ್ತು ಶಾಂತಕುಮಾರ್ ಹಾಜರಿದ್ದರು.

Leave a Reply

comments

Related Articles

error: