ಪ್ರಮುಖ ಸುದ್ದಿಮೈಸೂರು

ನಿಮ್ಮ ಸರ್ಕಾರ ವಿಸರ್ಜಿಸಿ ಬನ್ನಿ ಮತ್ತೆ ಚುನಾವಣೆಗೆ ಹೋಗೋಣ : ಸಿಎಂ ಕುಮಾರಸ್ವಾಮಿ ಅವರಿಗೆ ಬಿ.ಎಸ್.ಯಡಿಯೂರಪ್ಪ ಸವಾಲು

ಸಿಎಂ ಕುಮಾರಸ್ವಾಮಿ ಎನ್ನುವ ಬದಲು ಸಿಎಂ ಸಿದ್ದರಾಮಯ್ಯ ಎಂದು ಹೇಳಿ ಎಡವಟ್ಟು

ಮೈಸೂರು,ಜೂ.5:-  ಮೈಸೂರಿನಲ್ಲಿ ಸಿಎಂ ಕುಮಾರಸ್ವಾಮಿ ಎನ್ನುವ ಬದಲು ಸಿಎಂ ಸಿದ್ದರಾಮಯ್ಯ ಎಂದು  ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಎಡವಟ್ಟು ಮಾಡಿಕೊಂಡಿದ್ದಾರೆ.

ಮೈಸೂರಿನ ರಾಜೇಂದ್ರ ಕಲಾಮಂದಿರದಲ್ಲಿಂದು  ನಡೆಯುತ್ತಿರುವ ಬಿಜೆಪಿ ಕೃತಜ್ಞತಾ ಸಮಾವೇಶದಲ್ಲಿ ಮಾತನಾಡಿದ ಅವರು ನಾನು ಕಾಂಗ್ರೆಸ್ ಮುಲಾಜಿನಲ್ಲಿದ್ದೇನೆ ಎನ್ನುವ ಮೂಲಕ ಸಿದ್ದರಾಮಯ್ಯ ರಾಜ್ಯದ ಜನರಿಗೆ ಅಪಮಾನ ಮಾಡಿದ್ದಾರೆ ರೈತರ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಎರಡು ಬಾರಿ ಮುಖ್ಯಮಂತ್ರಿಯವರ ಹೆಸರನ್ನು ತಪ್ಪಾಗಿ ಹೇಳಿದ್ದು, ನಂತರ ಕಾರ್ಯಕರ್ತರೊಬ್ಬರು ಕುಮಾರಸ್ವಾಮಿ ಹೆಸರು ಬರೆದುಕೊಟ್ಟ ನಂತರ ಮಾತು ಸರಿಪಡಿಸಿಕೊಂಡಿದ್ದಾರೆ.

ಮೊನ್ನೆ ನಡೆದ ಚುನಾವಣೆಯಲ್ಲಿ  130 ಸ್ಥಾನ ಗೆಲುತ್ತೇವೆ ಅಂದುಕೊಂಡಿದ್ದೆವು. ನಂತರದ ಬೆಳವಣಿಗೆಯಲ್ಲಿ 104  ಸ್ಥಾನ ಬಂದಿದೆ‌. ಕುಮಾರಸ್ವಾಮಿ ಸರ್ಕಾರ ಜನರಿಗೆ ಗೊಂದಲ ಮಾಡುತ್ತಿದೆ. ಸಂಪುಟ ವಿಸ್ತರಣೆಗೆ ರಾಹುಲ್ ಗಾಂಧಿಗಾಗಿ ಕಾಯುತ್ತಿರುವ ನೀವು ಮೊದಲು ಸಾಲಮನ್ನಾ ಮಾಡಿ. ರಾಜ್ಯದ ಜನರಿಗೆ ಅಪಮಾನ ಮಾಡುವುದನ್ನು ನಿಲ್ಲಿಸಿ. ನಾನು ಅದೃಷ್ಟವಂತ ಸಿಎಂ ಆಗಿದ್ದೇನೆ. 6 ಕೋಟಿ ಜನರಿಂದ ಆಯ್ಕೆಯಾದ ಸಿಎಂ ಅಲ್ಲ ಅನ್ನುತ್ತೀರಿ.ಮೊದಲು ಈ ರೀತಿಯ ಹೇಳಿಕೆಯನ್ನು ನಿಲ್ಲಿಸಿ. ಸಿಎಂ ಆದ 24 ಗಂಟೆಗಳಲ್ಲಿ ಸಾಲಮನ್ನಾ ಮಾಡ್ತೀವಿ ಅಂದಿದ್ದರು. ಬಳಿಕ ರೈತರ ಸಭೆ ಕರೆದು ದೊಂಬರಾಟ ಶುರು ಮಾಡಿದರು. ನಾವು ಬಂದ್ ಮಾಡದೆ ಇದ್ದಿದ್ದರೆ ಅವರು ರೈತರ ಸಭೆಯನ್ನು ಕರೆಯುತ್ತಿರಲಿಲ್ಲ.ಎಂದು ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.

ನಾನೂ ಹೆಲಿಕ್ಯಾಪ್ಟರ್ ಮೂಲಕ ಮಹಾಂತನಂದಾ ಸ್ವಾಮೀಜಿ ಅಂತಿಮ ದರ್ಶನಕ್ಕೆ ಹೋಗಿದ್ದೆ. ಇದಕ್ಕಾಗಿ ಸ್ವತಹ ರಾಜ್ಯಪಾಲರ ಅನುಮತಿಯನ್ನು ಪಡೆದುಕೊಂಡು‌ ಹೋಗಿದ್ದೆ. ಆದರೆ ಇದನ್ನು ನೀವೂ ಪದೇ‌ಪದೇ ಈ ಹಣಕ್ಕೆ ಹೊಣೆ ಯಾರು ಅಂತೀರಾ.? ಹೆಲಿಕ್ಯಾಪ್ಟರ್ ಲ್ಲಿ ತಿರುಗಾಡಿದ್ದ ಬಗ್ಗೆ ನನಗೆ ಯಾಕೆ ಕೇಳುತ್ತೀರಿ.? ಕುಮಾರಸ್ವಾಮಿ ಅವರೇ ಈ‌ ಮಾತನ್ನು ನಿಮ್ಮ ಕಾರ್ಯದರ್ಶಿಗಳಿಗೆ ಕೇಳಬೇಕು. ಈ ಬಗ್ಗೆ ನೇರವಾದ ಬಹಿರಂಗವಾದ ಪತ್ರ ಬರೆಯುತ್ತೇನೆ. ಅಪ್ಪ ಮಕ್ಕಳು ಇಬ್ಬರು ಸತ್ಯ ಹರಿಶ್ಚಂದ್ರರಂತೆ ವರ್ತನೆ ಮಾಡುತ್ತಿದ್ದೀರಾ.? ಎಂದು ಸಿಎಂ ಕುಮಾರಸ್ವಾಮಿ ಹಾಗೂ ಹೆಚ್‌ಡಿದೇವೇಗೌಡರನ್ನು ಟೀಕಿಸಿದರು. ಬೇಕಿದ್ದರೆ ನಾಮು ಓಡಾಟ ಮಾಡಿದ ಖರ್ಚನ್ನು ನಾನೇ ಭರಿಸುತ್ತೇನೆ.ಇದನ್ನು ಕೂಡ ಪತ್ರದಲ್ಲಿ ಉಲ್ಲೇಖಿಸುತ್ತೇನೆ. ಸಾಲಮನ್ನಾ ಮಾಡುತ್ತೇನೆ ಅಂತ  ಹೇಳಿದವರು ನೀವೆ,ಆದರೆ ಇದೀಗಾ ರಾಜಕೀಯ ದೊಂಬರಾಟ ನಡೆಸುತ್ತಿದ್ದೀರಾ.?ಈ ಬಗ್ಗೆ ಮುಂದಿನ ದಿನಗಳಲ್ಲಿ ಹೋರಾಟ ಮಾಡುತ್ತೇವೆ. ಈ‌ ಬಗ್ಗೆ ಹಂತಹಂತವಾಗಿ ಸಿದ್ದತೆ ಮಾಡಿಕೊಳ್ಳುತ್ತೇವೆ.ಕುಮಾರಸ್ವಾಮಿ ಅಂಡ್ ಕಂಪನಿ ಏನಾಗಲಿದೆ ಅಂತ 15-20  ದಿನದಲ್ಲಿ ಗೊತ್ತಾಗಲಿದೆ. ಕುಮಾರಸ್ವಾಮಿ ನಿಮಗೆ ನೇರವಾಗಿ ಸವಾಲಾಕುತ್ತೇನೆ. ನಿಮ್ಮ ಸರ್ಕಾರ ವಿಸರ್ಜಿಸಿ ಬನ್ನಿ ಮತ್ತೆ ಚುನಾವಣೆಗೆ ಹೋಗೋಣ. ಯಾರು ಹೆಚ್ಚು ಸ್ಥಾನ ಪಡೆಯುತ್ತಾರೆ ಅಂತ ಗೊತ್ತಾಗತ್ತೆ ಎಂದು ಸಿಎಂ ಕುಮಾರಸ್ವಾಮಿಯವರಿಗೆ ಸವಾಲು ಹಾಕಿದರು.ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಸದ ಪ್ರತಾಪ್ ಸಿಂಹ ಶಾಸಕರಾದ ಎಸ್.ಎ.ರಾಮದಾಸ್, ನಾಗೇಂದ್ರ, ಬಿಜೆಪಿ ಮುಖಂಡರಾದ ಡಾ.ಬಿ.ಮಂಜುನಾಥ್, ತೇಜಸ್ವಿಸಿ ಗೌಡ, ಮ.ವಿ.ರಾಮ್ ಪ್ರಸಾದ್, ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: