ಪ್ರಮುಖ ಸುದ್ದಿ

ಪೆಟ್ರೋಲ್ ತುಂಬಿದ್ದ ಟ್ಯಾಂಕರ್ ರೈಲಿನ 12 ಬೋಗಿಯಲ್ಲಿ ಸೋರಿಕೆ

ರಾಜ್ಯ(ತುಮಕೂರು)ಜೂ.5:- ಪೆಟ್ರೋಲ್ ತುಂಬಿದ್ದ ಟ್ಯಾಂಕರ್ ರೈಲಿನ 12 ಬೋಗಿಯಲ್ಲಿ ಸೋರಿಕೆ ಕಂಡು ಬಂದ ಹಿನ್ನೆಲೆಯಲ್ಲಿ ಸುಮಾರು 9 ಗಂಟೆಗಳ ಕಾಲ ಟ್ಯಾಂಕರ್ ದುರಸ್ಥಿ ಕಾರ್ಯವನ್ನು ಪೊಲೀಸ್ ಬಂದೋಬಸ್ತ್‌ನಲ್ಲಿ ಕುಣಿಗಲ್ ತಾಲೂಕಿನ ಎಡೆಯೂರು ನಿಲ್ದಾಣದಲ್ಲಿ ನಡೆಸಲಾಯಿತು.

ಮಂಗಳೂರಿನಿಂದ ಬೆಂಗಳೂರಿನ ಯಶವಂತಪುರ ರೈಲ್ವೆ ನಿಲ್ದಾಣಕ್ಕೆ ಸುಮಾರು 51 ಬೋಗಿಗಳು ಇದ್ದ ಟ್ಯಾಂಕರ್ ರೈಲಿನಲ್ಲಿ ಪೆಟ್ರೋಲ್ ಸಾಗಿಸಲಾಗುತ್ತಿದ್ದು, ಎಡೆಯೂರಿನ ಬಳಿಗೆ ಬರುತ್ತಿದ್ದಂತೆ ಸುಮಾರು 12 ಬೋಗಿಯಲ್ಲಿ ಪೆಟ್ರೋಲ್ ಸೋರಿಕೆಯಾಗುವುದನ್ನು  ಗಮನಿಸಿದ ರೈಲ್ವೇ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಎಡೆಯೂರು ನಿಲ್ದಾಣದಲ್ಲಿ ಟ್ಯಾಂಕರ್ ರೈಲನ್ನು ನಿಲ್ಲಿಸಿ ನಂತರ ಹಾಸನ ಮತ್ತು ಮಂಗಳೂರಿನಿಂದ ತಜ್ಞರ ತಂಡ ಕರೆಸಿ ಸೋರಿಕೆಯಾಗುತ್ತಿದ್ದ ಟ್ಯಾಂಕರ್ ಸರಿಪಡಿಸುವ ಕಾರ್ಯ  ನಿನ್ನೆ ಸಂಜೆಯವೆರಗೂ ನಡೆಯಿತು. ಇದರಿಂದ ಸಂಭವಿಸಬಹುದಾದ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ. ಪೆಟ್ರೋಲ್ ತುಂಬಿದ್ದ ಟ್ಯಾಂಕರ್‌ಗೆ ಡಿವೈಎಸ್‍ಪಿ ವೆಂಕಟೇಶ್, ಸಿಪಿಐ ಅಶೋಕ್‌ಕುಮಾರ್ ನೇತೃತ್ವದಲ್ಲಿ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: