ಮೈಸೂರು

ನಟನದ ಹೊಸ ನಾಟಕ ’ಬಹುಮುಖಿ’ಯ ಎರಡನೇ ಪ್ರಯೋಗ ಡಿ.11ರಂದು

ಬೆಂಗಳೂರಿನ ರಂಗ ಶಂಕರದ ಸಹಯೋಗದಲ್ಲಿ ಈ ವರ್ಷದ ರಂಗಾಭ್ಯಾಸಿಗಳಿಗಾಗಿ ಖ್ಯಾತ ಬರಹಗಾರ ವಿವೇಕ್ ಶಾನಭಾಗರ ‘ಬಹುಮುಖಿ’ ನಾಟಕವನ್ನು ನಟನದ ರಂಗಶಿಕ್ಷಕ, ಯುವ ರಂಗಕರ್ಮಿ ಮೇಘ ಸಮೀರ ಅವರು ವಿನ್ಯಾಸಗೊಳಿಸಿ ನಿರ್ದೇಶಿಸಿದ್ದಾರೆ. ಡಿಸೆಂಬರ್ 11ರಂದು ಸಂಜೆ 6.30 ಮೈಸೂರಿನ ರಾಮಕೃಷ್ಣ ನಗರದಲ್ಲಿರುವ ನಟನ ರಂಗಶಾಲೆಯಲ್ಲಿ ಈ ನಾಟಕದಎರಡನೇ ಪ್ರಯೋಗ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ 9945555570, 9480468327 ಅನ್ನು ಸಂಪರ್ಕಿಸಬಹುದು.

ಮಂಡ್ಯರಮೇಶ್ ನೇತೃತ್ವದ ನಟನ ರಂಗಶಾಲೆಯು ಕಳೆದ ಅನೇಕ ವರ್ಷಗಳಿಂದ ರಂಗಭೂಮಿಯಲ್ಲಿ ನಿರಂತರ ಕ್ರಿಯಾಶೀಲವಾಗಿದ್ದು ರಂಗಭೂಮಿಯ ಅಧ್ಯಯನ, ಪ್ರಾತ್ಯಕ್ಷಿಕೆ, ಪ್ರಯೋಗ, ಪ್ರದರ್ಶನಗಳ ಮೂಲಕ ಶ್ರೇಷ್ಠತೆಯನ್ನು ಸಾಧಿಸುವುದರತ್ತ ಸತತವಾಗಿ ಪ್ರಯತ್ನಿಸುತ್ತಿದೆ.

bahumukhi-2

Leave a Reply

comments

Related Articles

error: