ದೇಶ

ರಸ್ತೆ ಅಪಘಾತ: 7 ಮಂದಿ ಸಾವು

ಲಕ್ನೋ, ಜೂ.5: ಟಿಪ್ಪರ್ ಮತ್ತು ಟ್ರ್ಯಾಕ್ಟರ್ ನಡುವೆ ಡಿಕ್ಕಿ ಹೊಡೆದ ಪರಿಣಾಮ ಏಳು ಮಂದಿ ಕಾರ್ಮಿಕರು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದಲ್ಲಿ ಕನೌಜ್ ಜಿಲ್ಲೆಯ ಜಪೆರ್ ಗ್ರಾಮದ ಬಳಿ  ಸಂಭವಿಸಿದೆ.

ಕನೌಜ್ ಜಿಲ್ಲೆಯ ಜಪೆರ್ ಗ್ರಾಮದ ಬಳಿ ಟಿಪ್ಪರ್ ಮತ್ತು ಟ್ರ್ಯಾಕ್ಟರ್ ನಡುವೆ ಡಿಕ್ಕಿಯಾಗಿ ಈ ನಿನ್ನೆ ರಾತ್ರಿ 11 ಗಂಟೆಯಲ್ಲಿ ದುರ್ಘಟನೆ ಸಂಭವಿಸಿತು. ಈ ದುರಂತದಲ್ಲಿ ಟ್ರ್ಯಾಕ್ಟರ್‍ನಲ್ಲಿದ್ದ ಏಳು ಕೂಲಿ ಕಾರ್ಮಿಕರು ಮೃತಪಟ್ಟರು. ಗಾಯಗೊಂಡ ಇತರ ಏಳು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಪಿ.ಎಸ್ )

Leave a Reply

comments

Related Articles

error: