ಕರ್ನಾಟಕ

ಸಿಎನ್ ಸಿ ವತಿಯಿಂದ ವಿಶ್ವ ಪರಿಸರ ದಿನಾಚರಣೆ

ಮಡಿಕೇರಿ,ಜೂ.5-ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಿಎನ್ ಸಿ ವತಿಯಿಂದ ದೇವಾಟ್ ಪರಂಬ್ ನರಮೇಧ ದುರಂತ ಸಮಾಧಿ ಸ್ಥಳದಲ್ಲಿ ಸಸಿಗಳನ್ನು ನೆಡಲಾಯಿತು. ಸಿಎನ್ ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಕೊಡವ ನೇತೃತ್ವದಲ್ಲಿ ಸಸಿಗಳನ್ನು ನೆಡಲಾಯಿತು.

ದೇವಾಟ್‍ಪರಂಬ್ ನರಮೇಧ ಸಮಾಧಿಯಲ್ಲಿ ಕೊಡವ ದಿವ್ಯಾತ್ಮಗಳು ನೆಲೆಸಿದ್ದು, ನಾವು ನೆಟ್ಟ ನೆರಳು ನೀಡುವ ಹಸಿರು ಗಿಡ ಮತ್ತು ಫಲ ಬಿಡುವ ಗಿಡಗಳು ಮುಂದೆ ಹೆಮ್ಮರವಾಗಿ ಬೆಳೆಯುವ ಮೂಲಕ ಗತಿಸಿದ ದಿವ್ಯಾತ್ಮಗಳಿಗೆ ಶಾಶ್ವತ ನೆರಳು ಮತ್ತು ತಂಪು ನೀಡಲಿ ಹಾಗೂ ಹೂ ಮತ್ತು ಫಲ ಬಿಡುವ ಮರಗಳಿಂದ ಪ್ರಾಣಿ ಪಕ್ಷಿಗಳು ದಿವ್ಯಾತ್ಮಗಳ ಹೆಸರಿನಲ್ಲಿ ತಣ್ಣಗೆ ನೆಮ್ಮದಿಯಿಂದ ಬದುಕಲಿ ಎಂಬ ಉದ್ದೇಶದಿಂದ ಸಸಿಗಳನ್ನು ನೆಡಲಾಗಿದೆ ಎಂದು ನಾಚಪ್ಪ ತಿಳಿಸಿದರು.

ಕಾರ್ಯಕ್ರಮದಲ್ಲಿ ಕಲಿಯಂಡ ಪ್ರಕಾಶ್, ಮೂಕೊಂಡ ದಿಲಿಪ್, ಚೆಂಬಂಡ ಜನತ್‍ಕುಮಾರ್, ಕುಲ್ಲೇರ ಕಾಳಪ್ಪ, ಅರೆಯಡ ಗಿರೀಶ್, ಅಪ್ಪಾರಂಡ ನೆಲ್ ದೇವಯ್ಯ ಭಾಗವಹಿಸಿದ್ದರು. (ಕೆಸಿಐ, ಎಂ.ಎನ್)

Leave a Reply

comments

Related Articles

error: