ದೇಶಪ್ರಮುಖ ಸುದ್ದಿ

ತ್ರಿವಳಿ ತಲಾಖ್ ಪದ್ಧತಿ ಸಂವಿಧಾನ ಬಾಹಿರ: ಅಲಹಾಬಾದ್ ಹೈಕೋರ್ಟ್‍

ಅಲಹಾಬಾದ್: ಮುಸ್ಲಿಂ ಸಮುದಾಯದಲ್ಲಿ ಜಾರಿಯಲ್ಲಿರುವ ತ್ರಿವಳಿ ತಲಾಖ್ ಪದ್ಧತಿ ಸಂವಿಧಾನ ವಿರೋಧಿ ಎಂದು ಅಲಹಾಬಾದ್‍ ಹೈಕೋರ್ಟ್‍ ಮಹತ್ವದ ತೀರ್ಪು ನೀಡಿದೆ.

ತ್ರಿವಳಿ ತಲಾಖ್ ಪದ್ಧತಿ ನಿಷೇಧದ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಪ್ರಯತ್ನದ ವಿರುದ್ಧ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಹೈಕೋರ್ಟ್‍ ಮೆಟ್ಟಿಲೇರಿತ್ತು.

ವಾದ ಆಲಿಸಿದ ಅಲಹಾಬಾದ್‍ ಹೈಕೋರ್ಟ್‍, ದೇಶದ ಸಂವಿಧಾನದಲ್ಲಿ ಹೇಳಿರುವ ಮೂಲಭೂತ ಹಕ್ಕುಗಳನ್ನು ನಿರ್ಬಂಧಿಸುವ ಯಾವುದೇ ಧರ್ಮ, ಮತ-ಪಂಥಗಳ ನಿಯಮಗಳನ್ನು ಒಪ್ಪಲು ಸಾಧ್ಯವಿಲ್ಲ. ತ್ರಿವಳಿ ತಲಾಖ್ ಪದ್ಧತಿಯಿಂದ ಮುಸ್ಲಿಂ ಮಹಿಳೆಯರ ಮೂಲಭೂತ ಹಕ್ಕುಗಳ ವಂಚನೆಯಾಗುತ್ತಿದೆ. ಹೀಗಾಗಿ ವೈಯಕ್ತಿಕ ಕಾನೂನು ಮಂಡಳಿಯ ವಾದ ಸ್ವೀಕಾರಾರ್ಹವಲ್ಲ ಎಂದಿದೆ.

ಪ್ರಗತಿಪರ ಮುಸ್ಲೀಮರಿಂದ ಸ್ವಾಗತ :

ಹೈಕೋರ್ಟ್‍ ತೀರ್ಪನ್ನು ಪ್ರಗತಿಪರ ಮುಸ್ಲೀಮರು ಸ್ವಾಗತಿಸಿದ್ದಾರೆ. “ಹಲವು ಮುಸ್ಲಿಂ ದೇಶಗಳಲ್ಲೂ ತ್ರಿವಳಿ ತಲಾಖ್ ಪದ್ಧತಿ ಆಚರಣೆಯನ್ನು ನಿಷೇಧಿಸಲಾಗಿದೆ. ತ್ರಿವಳಿ ತಲಾಖ್ ಪದ್ಧತಿ ಇಸ್ಲಾಮಿಕ್ ಷರಿಯತ್‍ನಲ್ಲಿ ಇಲ್ಲ. ಇದು ಅರೇಬಿಯಾದ ಖಲೀಫರೊಬ್ಬರು ತಂದ ಬದಲಾವಣೆ ಅಷ್ಟೇ. ದೇಶ-ಕಾಲಕ್ಕೆ ತಕ್ಕಂತೆ ಇಸ್ಲಾಂನ ಮೂಲ ಆಶಯಗಳನ್ನು ತಿರುಚಲಾಗಿದೆ. ಇದರಿಂದ ಮುಸ್ಲಿಂ ಸಮುದಾಯದ ಮಹಿಳೆಯರೇ ಕಷ್ಟ-ನಷ್ಟ ಅನುಭವಿಸುತ್ತಿದ್ದಾರೆ” ಎಂದು ಪ್ರಗತಿಪರ ಮುಸ್ಲೀಮರು ಅಭಿಪ್ರಾಪಯಟ್ಟಿದ್ದಾರೆ.

Leave a Reply

comments

Related Articles

error: