ಮೈಸೂರು

ಪರಿಸರದಲ್ಲಿ ಸಮತೋಲನ ಕಾಪಾಡಿಕೊಂಡಾಗ ಮಾತ್ರ ಪರಿಸರ ನಮ್ಮನ್ನು ಕಾಪಾಡುತ್ತದೆ: ಎಂ.ಮಹೇಶ್

ಮೈಸೂರು,(ಬೈಲಕುಪ್ಪೆ),ಜೂ.5-ಪರಿಸರದಲ್ಲಿ ಸಮತೋಲನ ಕಾಪಾಡಿಕೊಂಡಲ್ಲಿ ಪರಿಸರ ನಮ್ಮನ್ನು ಕಾಪಾಡುತ್ತದೆ ಎಂದು ಪಿಎಸ್‍ಐ ಎಂ.ಮಹೇಶ್ ತಿಳಿಸಿದರು.

ತಾಲೂಕಿನ ಬೈಲಕುಪ್ಪೆ ಆರಕ್ಷಕ ಠಾಣೆಯಲ್ಲಿ ಅರಣ್ಯ ಇಲಾಖೆ, ಟಿಬೆಟನ್ ನಿರಾಶ್ರಿತರ ತಂಡ ಹಾಗೂ ಪೊಲೀಸ್ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಪರಿಸರ ಕಾರ್ಯಕ್ರಮದಲ್ಲಿ ಸಸಿ ನೆಟ್ಟು ನೀರೆರದು ಮಾತನಾಡಿದ ಅವರು, ನಮ್ಮ ಸುತ್ತ ಮುತ್ತಲಿನ ಪರಿಸರವನ್ನು ಸಂರಕ್ಷಿಸುವ ಮನೋಭಾವವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು. ಮುಖ್ಯವಾಗಿ ಸಸಿ ನೆಡುವುದರ ಮಹತ್ವ ಪ್ರತಿಯೊಬ್ಬನಿಗೂ ತಿಳಿದಿರಬೇಕು ಎಂದರು.

ದೇಶದ ಇತಿಹಾಸವನ್ನು ಮೆಲುಕು ಹಾಕಿದಾಗ ಸಾಮ್ರಾಟ ಅಶೋಕ ಚಕ್ರವರ್ತಿ ಸಾಲು ಸಸಿಗಳನ್ನು ನೆಟ್ಟು ಪರಿಸರ ಉಳಿಸುವಲ್ಲಿ ಮಹತ್ವದ ಹೆಜ್ಜೆ ಇಟ್ಟವರು. ಹಾಗೆಯೇ ಸಾಲು ಮರದ ತಿಮ್ಮಕ್ಕ ಸಹ ಪರಿಸರ ಸಂರಕ್ಷಣೆಗಾಗಿ ಶ್ರಮಿಸಿದ್ದಾರೆ. ಈ ಪರಿಸರ ಪ್ರೇಮಿಗಳು ಮಾಡಿದ ಸಾಧನೆಗಳು ಇಂದಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಮಾರ್ಗದರ್ಶನವಾಗಬೇಕು ಎಂದರು.

ಸಿಬ್ಬಂದಿಗಳಾದ ಎಎಸ್‍ಐ ಶ್ರೀನಿವಾಸಲು, ಮುಖ್ಯ ಪೇದೆ ಸೊಮಶೇಖರ್, ಅಶೋಕ, ನಂದೀಶ, ಅಣ್ಣಯ್ಯ, ತ್ರಿಣೇಶ್, ಮೀರಾಬಿ, ನಸ್ರಿನ್‍ತಾಜ್, ಸೌಮ್ಯ, ಬೌದ್ಧ ಅನೂಯಾಯಿಗಳಾದ ನವಾಂಗ್ ತಂಡ, ತುಪ್‍ತೇನ್, ಅರಣ್ಯ ಅಧಿಕಾರಿಗಳಾದ ರವೀಂದ್ರ, ಕೊಟ್ರೇಶ್ ಇತರರು ಇದ್ದರು. (ಆರ್.ಬಿ.ಆರ್, ಎಂ.ಎನ್)

Leave a Reply

comments

Related Articles

error: