ಪ್ರಮುಖ ಸುದ್ದಿಮೈಸೂರು

ಸಮ್ಮಿಶ್ರ ಸರ್ಕಾರ ಸ್ಥಿರವಾಗಲೂ ತ್ಯಾಗ -ಸಹಕಾರ ಅಗತ್ಯ : ಬಸವರಾಜ ಹೊರಟ್ಟಿ

ದುರುಪಯೋಗವಾಗುತ್ತಿರುವ ಆರ್.ಟಿ.ಇ. ಕಾಯ್ದೆ ತಡೆಗೆ ಕ್ರಮ

ಮೈಸೂರು,ಜೂ.5 : ಗೊಂದಲ ನಿರ್ಮಾಣವಾಗದಂತೆ ಸಮ್ಮಿಶ್ರ ಸರ್ಕಾರ ಸ್ಥಿರವಾಗಬೇಕಿದ್ದು ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಶಾಸಕರಿಂದಲೂ ತ್ಯಾಗ, ಸಂಯಮ ಹಾಗೂ ಸಹಕಾರ ಬೇಕಿದೆ, ಅಲ್ಲದೇ ನಾನು ಸಚಿವಾಕಾಂಕ್ಷಿಯಲ್ಲ ಅದಕ್ಕಾಗಿ ಲಾಭಿ ಮಾಡುವುದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಸ್ಪಷ್ಟಪಡಿಸಿದರು.

ಮಂಗಳವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು. ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂದು ಆರಂಭಿಸಿದ ಆರ್.ಟಿ.ಇ.ಯೋಜನೆಯು ದುರ್ಬಳಕೆಯಾಗುತ್ತಿದೆ. ಈ ಯೋಜನೆಯಡಿ ಆಂಗ್ಲ ಮಾಧ್ಯಮಕ್ಕೆ ನೀಡುವ ನೋಂದಾಣಿಯನ್ನು ರದ್ದಾಗಬೇಕು. ಮೊದಲ ಕನ್ನಡ ಮಾಧ್ಯಮ, ನಂತರ ಅನುದಾನ ಶಾಲೆ, ಅಲ್ಲಿ ಸೀಟು ಸಿಗದೆ ಇದ್ದರೆ ಮಾತ್ರ ಅನುದಾನ ರಹಿತ  ಶಾಲೆಯಲ್ಲಿ ಅವಕಾಶ ನೀಡಬೇಕು. ಅಲ್ಲದೇ ಯೋಜನೆಗೆ 684 ಕೋಟಿ ರೂಗಳನ್ನು ಈ ವ್ಯಯ್ಯಿಸಲಾಗುತ್ತಿದ್ದು ಇದರ ದುರುಪಯೋಗ ತಡೆಯಲೂ ಕಡಿವಾಣ ಅಗತ್ಯವೆಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದರು.

ಶಿಕ್ಷಣ ಕ್ಷೇತ್ರ ಕ್ಲಿಷ್ಟವಾಗಿದೆ. ಸಚಿವರಾಗಿದ್ದ ಆಳವಾದ ಅಧ್ಯಯನ ನಡೆಸಿ ಹಲವು ವರದಿಗಳನ್ನು ತಯಾರಿಸಿದ್ದು ಹಳ್ಳಿಗಾಡಿನ ಬಾಲಕಿಯರ ಶಿಕ್ಷಣ ಉತ್ತೇಜನಕ್ಕಾಗಿ 1646 ಪ್ರೌಢಶಾಲೆ, 200 ಪದವಿ ಕಾಲೇಜು ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮಂಜೂರುಗೊಳಿಸಿದ್ದರು, ಅಲ್ಲದೇ ‍ಪ್ರೌಢಶಾಲೆ, ಪದವಿಪೂರ್ವ ಕಾಲೇಜುಗಳಿಗೆ 500 ಕೋಟಿ ರೂ ಬಿಡುಗಡೆ, 48 ಸಾವಿರ ಶಿಕ್ಷಕರ ನೇಮಕ, ಬಿಸಿಯೂಟದ,ಬೈಸಿಕಲ್ ವಿತರಣೆ, ಶಿಕ್ಷಕರ ವರ್ಗಾವಣೆ ನೀತಿಯನ್ನು ಹೊರಡಿಸಿದ್ದೇವು ಎಂದು ಸ್ಮರಿಸಿದರು.

ಕಳಪೆ ಮಟ್ಟದ ಸೈಕಲ್ ನೀಡುವ ಮೂಲಕ ಶಿಕ್ಷಣ ಇಲಾಖೆಯ ಅಕ್ರಮವೆಸಗುತ್ತಿದ್ದಾರೆ, ಶಿಕ್ಷಣ ಮಾಜಿ ಸಚಿವ ತನ್ವೀರ್ ಸೇಠ್ ಅವರು ಶೈಕ್ಷಣಿಕ ಕ್ಷೇತ್ರ ಸುಧಾರಿಸಲು ಯಾವುದೇ ಕ್ರಮವಹಿಸದೇ ಇರುವುದು ದುರಂತವೆಂದರು.

ಸರ್ಕಾರಿ ಶಿಕ್ಷಕರ ಮೂಲ ವೇತನಕ್ಕಿಂತ 100 ಕಡಿಮೆ ವೇತನ :  ಸರ್ಕಾರಿ ಶಾಲಾ ಶಿಕ್ಷಕರ ನಿಗದಿತ ಮೂಲವೇತನಕ್ಕಿಂತ 100 ರೂ ಕಡಿಮೆ ವೇತನವನ್ನು ಅನುದಾನ ರಹಿತ ಶಾಲಾ ಶಿಕ್ಷಕರಿಗೂ ನೀಡಬೇಕು ಹಾಗೂ ಚೆಕ್ ಮೂಲಕವೇ ನೀಡಬೇಕು ಆದೇಶವನ್ನು ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೊರಡಿಸಲಿದ್ದು ಅದರಂತೆ ಶಿಕ್ಷಕರ ಜೀವನ ಮಟ್ಟ ಸುಧಾರಿಸಬೇಕಿದೆ ಎಂದರು.

ಒಂದೇ ಇಲಾಖೆ : ಉನ್ನತ ಹಾಗೂ ಪ್ರಾಥಮಿಕ ಶಿಕ್ಷಣವನ್ನು ಒಂದೇ ಇಲಾಖೆಯಡಿ ತರುವುದರಿಂದ ಕ್ಷೇತ್ರದ ಸಮಗ್ರ ಸುಧಾರಣೆ ಸಾಧ್ಯವಾಗುವುದು ಎಂದು ಅಭಿಪ್ರಾಯಪಟ್ಟರು.

ವಿಧಾನ ಪರಿಷತ್ ಸದಸ್ಯ ಶ್ರೀಕಂಠೇಗೌಡ ಮಾತನಾಡಿ ದಕ್ಷಿಣ ಪದವೀಧರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮರಿತಿಬ್ಬೇಗೌಡ ಅವರಿಗೆ ಮೊದಲ ಪ್ರಾಶಸ್ತ್ಯದ ಮತ ನೀಡಬೇಕೆಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಅಭ್ಯರ್ಥಿ ಮರಿತಿಬ್ಬೇಗೌಡ, ಎಸ್.ಬಿ.ಎಂ. ನಟರಾಜ್ ಇನ್ನಿತರರು ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: