ಕರ್ನಾಟಕಪ್ರಮುಖ ಸುದ್ದಿ

ಬಸವರಾಜ್ ಹೊರಟ್ಟಿ, ಎಚ್.ವಿಶ್ವನಾಥ್‍ಗೂ ಸಚಿವ ಸ್ಥಾನ ತಪ್ಪುವ ಸಾಧ್ಯತೆ?

ಬೆಂಗಳೂರು (ಜೂನ್ 5): ಸಚಿವ ಸ್ಥಾನ ಕಲ್ಪಿಸುವ ಕುರಿತು ಜೆಡಿಎಸ್‍ನಲ್ಲಿ ಮಹತ್ವದ ಬೆಳವಣಿಗೆಗಳಾಗಿದ್ದು, ಬಸವರಾಜ್ ಹೊರಟ್ಟಿ ಹಾಗೂ ಹೆಚ್. ವಿಶ್ವನಾಥ್ ಅವರಿಗೆ ಈ ಬಾರಿ ಸಚಿವ ಸ್ಥಾನ ಸಿಗುವುದು ಕಷ್ಟವೇ ಎಂದು ಹೇಳಲಾಗುತ್ತಿದೆ.

ಕಾಂಗ್ರೆಸ್ ಜೊತೆ ಮೈತ್ರಿಕೂಟದ ಸರ್ಕಾರ ರಚಿಸಿರುವ ಕಾರಣ ಜೆಡಿಎಸ್ ಪಾಲಿಗೆ ಕೇವಲ ಹನ್ನೊಂದು ಸಚಿವ ಸ್ಥಾನಗಳು ಮಾತ್ರ ಲಭ್ಯವಾಗಿವೆ. ಹೀಗಾಗಿ ಹೀಗಾಗಿ ಜಿಲ್ಲೆಗೊಂದೇ ಮಂತ್ರಿ ಸ್ಥಾನ ಎಂಬ ತೀರ್ಮಾನಕ್ಕೆ ಜೆಡಿಎಸ್ ವರಿಷ್ಠರು ಬಂದಿದ್ದಾರೆ ಎಂದೂ ತಿಳಿದುಬಂದಿದೆ.

ಮೈಸೂರು ಜಿಲ್ಲೆಯಿಂದ ಜಿ.ಟಿ.ದೇವೇಗೌಡ ಅವರಿಗೆ ಸಚಿವ ಸ್ಥಾನ ನೀಡುತ್ತಿರುವುದರಿಂದ ಹೆಚ್.ವಿಶ್ವನಾಥ್ ಅವರು ಅವಕಾಶ ವಂಚಿತರಾಗಲಿದ್ದಾರೆ.

ಇನ್ನು ಬಸವರಾಜ ಹೊರಟ್ಟಿ ವಿಧಾನ ಪರಿಷತ್ ಸದಸ್ಯರಾಗಿರುವ ಕಾರಣ ಸಚಿವ ಸ್ಥಾನ ಲಭಿಸುವುದು ನೀಡಲು ಸಾಧ್ಯವಿಲ್ಲ ಎಂದು ಸ್ವತಃ ದೇವೇಗೌಡರೇ ಹೊರಟ್ಟಿಯವರಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಈ ಬಾರಿ ಸಚಿವ ಸ್ಥಾನದ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ. ಮಾತ್ರವಲ್ಲ ಎಲ್ಲ ಶಾಸಕರನ್ನೂ ಸಮಾಧಾನಪಡಿಸಿ ಜೊತೆಗಿಟ್ಟುಕೊಳ್ಳುವುದು ಅನಿವಾರ್ಯವಾಗಿದೆ. ಹೀಗಿರುವಾಗ ವಿಧಾನಪರಿಷತ್ ಸದಸ್ಯರಿಗೆ ಸಚಿವ ಸ್ಥಾನ ನೀಡುವುದು ಕಷ್ಟವಾಗಿದೆ.

ಜೊತೆಗೆ ಉತ್ತರ ಕರ್ನಾಟಕ ಭಾಗದಲ್ಲಿ ಲಿಂಗಾಯತ ಸಮುದಾಯವು ಜೆಡಿಎಸ್ ಪಕ್ಷಕ್ಕೆ ಬೆಂಬಲಿಸಿಲ್ಲ. ಹೀಗಾಗಿ ಸಚಿವ ಸ್ಥಾನ ನೀಡಲು ಸಾಧ್ಯವಿಲ್ಲ ಎಂದು ದೇವೇಗೌಡರು ತಿಳಿಸಿದ್ದಾರೆ ಎನ್ನಲಾಗಿದೆ. (ಎನ್.ಬಿ)

Leave a Reply

comments

Related Articles

error: