ಸುದ್ದಿ ಸಂಕ್ಷಿಪ್ತ

ಸಿ.ಬಿ.ಸಿ.ಎಸ್ ಪದ್ಧತಿ ಅನುಷ್ಠಾನ : ನಾಳೆಯಿಂದ ಪ್ರಾಂಶುಪಾಲ-ಅಧ್ಯಾಪಕರ ಕಾರ್ಯಾಗಾರ

ಮೈಸೂರು,ಜೂ.5 : ಮೈಸೂರು ವಿಶ್ವವಿದ್ಯಾನಿಲಯದ ಕಾಲೇಜು ಅಭಿವೃದ್ಧಿ ಮಂಡಳಿಯಿಂದ ಸ್ನಾತಕ ಪದವಿಯಲ್ಲಿ ಸಿ.ಬಿ.ಸಿ.ಎಸ್. ಪದ್ಧತಿಯನ್ನು ಅನುಷ್ಠಾನಗೊಳಿಸಲು ಎರಡು ದಿನಗಳ ಪದವಿ ಕಾಲೇಜುಗಳ ಪ್ರಾಂಶುಪಾಲ ಮತ್ತು ಅಧ್ಯಾಪಕರ ಕಾರ್ಯಾಗಾರದ ಉದ್ಘಾಟನೆಯನ್ನು ಜೂ.6ರ ಬೆಳಗ್ಗೆ 10ಕ್ಕೆ ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ಏರ್ಪಡಿಸಿದೆ.

ಕಾಶ್ಮೀರ ಮತ್ತು ಪಾಂಡಿಚೇರಿ ವಿವಿಯ ವಿಶ್ರಾಂತ ಕುಲಪತಿ ಪ್ರೊ.ಜೆ.ಎ.ಕೆ.ತರೀನ್ ಉದ್ಘಾಟಿಸುವರು, ಪ್ರಭಾರ ಕುಲಪತಿ ಪ್ರೊ.ಟಿ.ಕೆ.ಉಮೇಶ್ ಅಧ್ಯಕ್ಷತೆ. ಮುಖ್ಯ ಅತಿಥಿಗಳಾಗಿ ಕುಲಸಚಿವೆ ಡಿ.ಭಾರತಿ, ಪಿ.ಎಂ.ಇ.ಬಿ. ನಿರ್ದೇಶಕ ಪ್ರೊ.ಯಶವಂತ ಡೋಂಗ್ರೆ ಉಪಸ್ಥಿತರಿರುವರು ಎಂದು ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕ ಡಾ.ಎಸ್.ಶ್ರೀಕಂಠಸ್ವಾಮಿ ಪ್ರಕಟಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: