ಸುದ್ದಿ ಸಂಕ್ಷಿಪ್ತ

ಹಿರಿಯ ನಾಗರಿಕರಿಗೆ ಗುರುತಿನ ಚೀಟಿ ವಿತರಣೆ

ಮೈಸೂರು,ಜೂ.5 : ಜೆಎಸ್ಎಸ್ ಮೆಡಿಕಲ್ ಸರ್ವಿಸ್ ಟ್ರಸ್ಟ್, ನಗರ ಪೊಲೀಸ್ ಇಲಾಖೆ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಜೆಎಸ್ಎಸ್ ಹಿರಿಯ ನಾಗರಿಕರ ಸಹಾಯವಾಣಿಯವತಿಯಿಂದ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ 2018-19ನೇ ಸಾಲಿನ ಗುರುತಿನ ಚೀಟಿ ವಿತರಣೆಯನ್ನು ಆಯೋಜಿಸಿದೆ.

ಈ ಗುರುತಿನ ಚೀಟಿಯನ್ನು ಬೆಳಗ್ಗೆ 9 ರಿಂದ ಸಂಜೆ 7ರವರೆಗೆ ನೀಡಲಿದ್ದು ಮಾಹಿತಿಗಾಗಿ ದೂ.ಸಂ. 0821 2548253/2448138, ಸುಂಕ ರಹಿತ 1090 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: