
ಮೈಸೂರು
ನಗರದ ಬಹುತೇಕ ಎಟಿಎಂಗಳಲ್ಲಿ ದುಡ್ಡಿಲ್ಲ..!
ಕೇಂದ್ರ ಸರ್ಕಾರ ಗರಿಷ್ಠ ಮೊತ್ತದ ನೋಟುಗಳನ್ನು ರದ್ದು ಮಾಡಿ ಇಂದಿಗೆ ಒಂದು ತಿಂಗಳು ಕಳೆದಿದೆ. ಕಳೆದ ಒಂದು ತಿಂಗಳಿನಿಂದ ನೋಟಿಗಾಗಿ ಜನರು ಪರಿತಪಿಸುತ್ತಿರೋದು ಸಾಮಾನ್ಯವಾಗಿದೆ.
ಮೈಸೂರಲ್ಲಿ ಆರಂಭದಲ್ಲಿ ನೋಟು ರದ್ದತಿ ಬಹಳಷ್ಟು ಸಮಸ್ಯೆಯನ್ನು ಸೃಷ್ಟಿಸಿತ್ತು. ಇದೀಗ ನೋಟಿನ ಬಿಸಿ ತಣ್ಣಗಾಗಿದ್ದು ಮೈಸೂರಿನ ಬಹುತೇಕ ಬ್ಯಾಂಕ್ ಹಾಗೂ ಎಟಿಎಂಗಳು ಜನರಿಲ್ಲದೆ ಭಣಗುಡುತ್ತಿವೆ. ಮೈಸೂರಿನಲ್ಲಿ ಪ್ರಮುಖ ವ್ಯವಹಾರ ನಡೆಯುವ ಬ್ಯಾಂಕ್ಗಳ ಮುಂದೆ ಜನರ ಸಾಲು ಸಂಪೂರ್ಣವಾಗಿ ಕಡಿಮೆಯಾಗಿದೆ. ಎಲ್ಲಿ ನೋಡಿದರು ಜನರು ದುಡ್ಡಿಲ್ಲ ಹಾಗಾಗಿ ಬ್ಯಾಂಕ್ ಗೆ ಹೋಗೋಲ್ಲ ಅಂತಿದ್ದಾರೆ. ಇನ್ನು, ಎಟಿಎಂ ಕೇಂದ್ರಗಳು ಬಹುತೇಕ ಕಡೆ ಬಾಗಿಲು ಹಾಕಿದ್ದು. ಕೆಲ ಕಡೆ ನೋ ಕ್ಯಾಶ್ ಬೋರ್ಡ್ ತೂಗಾಡುತ್ತಿದೆ. ಈ ಹಿನ್ನೆಲೆಯಲ್ಲಿ ಮೈಸೂರಿಗರು ಬಹುತೇಕ ಕ್ಯಾಶ್ ಲೇಸ್ ಪದ್ಧತಿಗೆ ಹೊಂದಿಕೊಳ್ಳುತ್ತಿದ್ದು, ಕಾರ್ಡ್ ಮೂಲಕ ವ್ಯವಹಾರದ ಕಡೆ ಗಮನ ನೀಡಿದಂತೆ ಕಂಡುಬರುತ್ತಿದೆ.