ಮೈಸೂರು

ವಿಧಾನ ಪರಿಷತ್ ಚುನಾವಣೆ: ಕಡ್ಡಾಯವಾಗಿ ಮತದಾನ ಮಾಡಲು ಚುನಾವಣಾಧಿಕಾರಿ ಹೇಮಲತಾ ಮನವಿ

ಮೈಸೂರು, ಜೂನ್ 5:-  ಭಾರತ ಚುನಾವಣಾ ಆಯೋಗದ ಆದೇಶದಂತೆ 2018ರ ಜೂನ್ 8 ರಂದು ಕರ್ನಾಟಕ ನೈರುತ್ಯ ಪದವೀಧರರ ಕ್ಷೇತ್ರ, ನೈರುತ್ಯ ಶಿಕ್ಷಕರ ಕ್ಷೇತ್ರ ಮತ್ತು ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್‍ಗೆ ಚುನಾವಣೆ ನಡೆಯುತ್ತಿದ್ದು, ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿರುವ ಮತದಾರರು ಕಡ್ಡಾಯವಾಗಿ ಮತದಾನ ಮಾಡಬೇಕೆಂದು ಚುನಾವಣಾಧಿಕಾರಿಗಳೂ ಆಗಿರುವ ಮೈಸೂರು ಪ್ರಾದೇಶಿಕ ಆಯುಕ್ತರಾದ ಹೇಮಲತಾ ಅವರು ಮನವಿ ಮಾಡಿದ್ದಾರೆ.

ಮತದಾನವು ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದೆ. ಮತದಾರರು ತಮ್ಮ ಹೆಸರಿನ ಮೂಲಕವೇ ಭಾಗದ ಸಂಖ್ಯೆ, ಮತದಾನದ ವಿವರಗಳನ್ನು ಮೈಸೂರು ಪ್ರಾದೇಶಿಕ ಆಯುಕ್ತರ ಕಚೇರಿಯ ವೆಬ್‍ಸೈಟ್ rcmysuru.gov.in ನ Hyper link ಮೂಲಕ ಪರಿಶೀಲಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಯು ಸಹ ಈ ವೆಬ್‍ಸೈಟ್‍ನಲ್ಲಿ ದೊರೆಯಲಿದೆ. ಎಲ್ಲಾ ಮತದಾರರು ಈ ಪ್ರಯೋಜನ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಅವರು ಕೋರಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: