ಮೈಸೂರು

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಜಾಗೃತಿ ಜಾಥಾ

ಮೈಸೂರು,ಜೂ.6:- ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪುರಸಭೆ, ಶಾಲಾ ಮಕ್ಕಳು, ಮತ್ತು ಯುವ ಬ್ರಿಗೇಡ್ ಕಾರ್ಯಕರ್ತರು ನಂಜನಗೂಡಿನ ಆರ್.ಪಿ.ರಸ್ತೆ, ಎಂ.ಜಿ.ರಸ್ತೆ ಮತ್ತು ರಥಬೀದಿಗಳಲ್ಲಿ ಸಾರ್ವಜನಿಕರಿಗೆ ಪರಿಸರ ಜಾಗೃತಿ ಮೂಡಿಸಲು ಜಾಗೃತಿ ಜಾಥಾ ನಡೆಸಿದರು.

ನಿನ್ನೆ ನಡೆದ ಜಾಥಾದಲ್ಲಿ  ಪರಿಸರವನ್ನು ಉಳಿಸಿ, ಗಿಡಗಳನ್ನು ನಾಶ ಮಾಡಬೇಡಿ ಎಂದು, ಹೊಸದಾಗಿ ಗಿಡಗಳನ್ನು ಬೆಳೆಸಿ, ಮತ್ತು ನೀರಿನ ಅಪವ್ಯಯ ಮಾಡಬೇಡಿ, ನದಿಯನ್ನು ಸ್ವಚ್ಛವಾಗಿರಿಸಿ,ಮತ್ತು ಸಂರಕ್ಷಿಸಿ ಹೀಗೆ ವಿವಿಧರೀತಿ ಘೋಷಣೆಯ ಭಿತ್ತಿ ಪತ್ರಗಳನ್ನು ಹಿಡಿದು, ಘೋಷಣೆ ಕೂಗುತ್ತ ಜಾಥಾ ನಡೆಸಿದರು.

ನಗರಸಭಾ ಆಯುಕ್ತ ವಿಜಯ್ ಮಾತನಾಡಿ ನಗರದಲ್ಲಿ 7ದಿನಗಳ ಕಾಲ ಪರಿಸರದ ಬಗ್ಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ರಸ್ತೆಯಲ್ಲಿ ಸಾಲುಮರವನ್ನು ನೆಡುವುದು, ನದಿ ಸ್ವಚ್ಛತೆ ಮಾಡುವುದು, ನಮ್ಮ ನಮ್ಮ ಮನೆ ಅಂಗಳದಲ್ಲಿ ಗಿಡ ನೆಡುವುದು, ಪ್ಲಾಸ್ಟಿಕ್ ಬ್ಯಾಗು/ವಸ್ತುಗಳನ್ನು ನಿಯಂತ್ರಿಸುವುದು, ಕಾನೂನು ಪ್ರಕಾರ ಕ್ರಮಕೈಗೊಳ್ಳುವುದು, ಇವೇ ಮುಂತಾದ ಕಾರ್ಯಕ್ರಮಗಳನ್ನು ಮಾಡುವುದಾಗಿ ತಿಳಿಸಿದರು. ಮುಂದಿನ ಪೀಳಿಗೆಗೆ ಜಲಸಂರಕ್ಷಣೆ, ಕಾಡು ಬೆಳೆಸುವುದು, ಹಸಿರು ಕ್ರಾಂತಿ ಮಾಡುವುದು, ಪರಿಸರಕ್ಕೆ ಹಾನಿ ಸಂಭವಿಸುವ ಯಾವುದೇ ಕ್ರಮವನ್ನು ಉಲ್ಲಂಘಿಸಿದವರ ಮೇಲೆಕಾನೂನು ಕ್ರಮಕೈಗೊಳ್ಳುವುದು ಮುಂತಾದುವುಗಳನ್ನು ನಡೆಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭ ನಗರಸಭಾ ಅಧ್ಯಕ್ಷೆ ಪುಷ್ಪಲತಾ, ಮತ್ತು ಯುವ ಬ್ರಿಗೇಡ್ ಮುಖಂಡ ಪೊಲೀಸ್ ಕಿಟ್ಟಿ, ಮತ್ತು ಶಾಲಾ ಮಕ್ಕಳು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: