ಸುದ್ದಿ ಸಂಕ್ಷಿಪ್ತ

ಜನ್ಮಶತಮಾನೋತ್ಸವ

ಭಾರತ ರತ್ನ ಎಂ.ಎಸ್. ಸುಬ್ಬಲಕ್ಷ್ಮಿ, ರಾಷ್ಟ್ರೀಯ ಸಂಗೀತ ಪ್ರಶಸ್ತಿ ಹಾಗೂ ಭ್ರಮರ ಟ್ರಸ್ಟಿನ ಜೀವಮಾನ ಸಾಧನಾ ಪ್ರಶಸ್ತಿ ಪ್ರದಾನ ಸಮಾರಂಭ ಡಿ11ರಂದು ಸಂಜೆ 6 ಗಂಟೆಗೆ ಸರಸ್ವತಿಪುರಂನಲ್ಲಿರುವ ಜೆಎಸ್‍ಎಸ್ ಮಹಿಳಾ ಕಾಲೇಜು ಆವರಣದ ನವಜ್ಯೋತಿ ಸಬಾಂಗಣದಲ್ಲಿ ನಡೆಯಲಿದೆ. ಕುಲಪತಿಗಳಾದ ಪ್ರೊ.ಕೆ.ಎಸ್. ರಂಗಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಭಾರತ ರತ್ನ ಎಂ.ಎಸ್. ಸುಬ್ಬಲಕ್ಷ್ಮಿ ರಾಷ್ಟ್ರೀಯ ಸಂಗೀತ ಪ್ರಶಸ್ತಿ ಪುರಸ್ಕೃತರು ವಿದ್ವಾನ್. ಮಧುರೈ ಶಿವಗಣೇಶ್, ಭ್ರಮರ ಟ್ರಸ್ಟಿನ ಜೀವಮಾನ ಸಾಧನಾ ಪ್ರಶಸ್ತಿ ಪುರಸ್ಕೃತರು ವಿದುಷಿ. ಡಾ. ವಸುಂಧರಾ ದೊರೆಸ್ವಾಮಿ. ಸುತ್ತೂರು ಕ್ಷೇತ್ರದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಲಿದ್ದಾರೆ.

Leave a Reply

comments

Related Articles

error: