
ಪ್ರಮುಖ ಸುದ್ದಿ
ಹೇಮಾವತಿ ನದಿಯ ದಂಡೆಯಲ್ಲಿ ತ್ಯಾಜ್ಯವಸ್ತು
ರಾಜ್ಯ(ಹಾಸನ)ಜೂ.6:- ಹೇಮಾವತಿ ನದಿಯ ದಂಡೆಯಲ್ಲಿ ಸಕಲೇಶಪುರ ಪಟ್ಟಣದ ತ್ಯಾಜ್ಯವಸ್ತುಗಳನ್ನು ಪುರಸಭೆಯು ಸುರಿಯುತ್ತಿರುವ ಪರಿಣಾಮ ನದಿಯ ನೀರು ಕಲುಷಿತಗೊಳ್ಳುತ್ತಿದ್ದು ಸಾಂಕ್ರಾಮಿಕ ಕಾಯಿಲೆಗಳು ಹರಡುವ ಭೀತಿ ಎದುರಾಗಿದ್ದು, ಜನತೆ ಕಂಗಾಲಾಗಿದ್ದಾರೆ.
ಕೋಟಿಗಟ್ಟಲೆ ಹಣವನ್ನು ವ್ಯಯಮಾಡಿ ಸಮೀಪದ ಮಳಲಿ ಗ್ರಾಮದಲ್ಲಿ ಘನ ತ್ಯಾಜ್ಯ ವಸ್ತು ವಿಲೇವಾರಿ ಘಟಕ ಸ್ಥಾಪನೆ ಮಾಡಿದ್ದರೂ ಕೂಡ ಅಲ್ಲಿಗೆ ಕಸವನ್ನು ವಿಲೇವಾರಿ ಮಾಡದೆ ನದಿಯ ದಂಡೆಯಲ್ಲಿ ಕಸ ಸುರಿದು ಪುರಸಭೆಯು ಇಲ್ಲಿನ ಜನತೆಯ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ. (ಕೆ.ಎಸ್,ಎಸ್.ಎಚ್)