
ಪ್ರಮುಖ ಸುದ್ದಿ
ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ನಿರ್ದೇಶಕ ಸಾಜಿದ್ ಖಾನ್ ಶಾಮೀಲು
ದೇಶ(ನವದೆಹಲಿ)ಜೂ.6:- ಐಪಿಎಲ್ ಬೆಟ್ಟಿಂಗ್ ಕುರಿತು ನಟ ಅರ್ಬಾಜ್ ಖಾನ್ ಹೆಸರು ಹೊರಬರುತ್ತಿದ್ದಂತೆಯೇ ಇದೀಗ ಬುಕ್ಕಿ ಸೋನು ಚಲನಚಿತ್ರ ನಿರ್ದೇಶಕರೊಬ್ಬರ ಹೆಸರು ಬಾಯ್ಬಿಟ್ಟಿದ್ದಾನೆ.
ಸೋನು ನಿರ್ದೇಶಕ ಸಾಜಿದ್ ಖಾನ್ ಹೆಸರನ್ನು ಉಲ್ಲೇಖಿಸಿದ್ದು, ನ್ಯೂಸ್ ಏಜೆನ್ಸಿಯೊಂದರ ವರದಿಯ ಪ್ರಕಾರ ಸಾಜಿದ್ ಖಾನ್ ಕಳೆದ ಏಳು ವರ್ಷಗಳಿಂದ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದರು. ಸೋನು ಆರೋಪದ ಮೇರೆಗೆ ಥಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೆ ಇದುವರೆಗೂ ಪೊಲೀಸರು ಸಾಜಿದ್ ಖಾನ್ ಗೆ ನೋಟೀಸ್ ಕಳುಹಿಸಿಲ್ಲ ಎನ್ನಲಾಗಿದೆ. (ಎಸ್.ಎಚ್)