ಸುದ್ದಿ ಸಂಕ್ಷಿಪ್ತ

ರಂಗ ಪ್ರಶಸ್ತಿ ಮತ್ತು ಜಾನಪದ ಪ್ರಶಸ್ತಿಗೆ ಆಯ್ಕೆ

ಮೈಸೂರಿನ ರಂಗ ಪಣತ ಉಬ್ಬೂರು ಸಂಸ್ಥೆ ನೀಡುವ ಉಬ್ಬೂರು ಪಟೇಲ್ ಯು.ಟಿ. ಶಾಮಯ್ಯಗೌಡ ರಂಗ ಪ್ರಶಸ್ತಿಗೆ ಖ್ಯಾತ ರಂಗ ಸಂಘಟಕರು ಮತ್ತು ರಂಗ ಪೋಷಕರಾದ ವಿಜಯಾ ಸಿಂಧುವಳ್ಳಿ ಮತ್ತು ಉಬ್ಬೂರು ಕಮಲಮ್ಮ ಶಾಮಯ್ಯಗೌಡ ಜಾನಪದ ಪ್ರಶಸ್ತಿಗೆ ತೀರ್ಥಹಳ್ಳಿಯ ಖ್ಯಾತ ಯಕ್ಷಗಾನ ಕಲಾವಿದರು ಮತ್ತು ಪತ್ರಕರ್ತರಾದ ಬಿ.ಗಣಪತಿ ಅವರು ಆಯ್ಕೆಯಾಗಿದ್ದಾರೆ.

ಪ್ರಶಸ್ತಿ ಪ್ರದಾನ ಸಮಾರಂಭ ಡಿ.25ರಂದು ಸಂಜೆ 6 ಗಂಟೆಗೆ ಕಲಾಮಂದಿರದಲ್ಲಿ ನಡೆಯಲಿದೆ. ಖ್ಯಾತ ವನ್ಯಜೀವಿ ತಜ್ಞ, ಪರಿಸರ ತಜ್ಞ ಮತ್ತು ಪ್ರಜಾವಾಣಿ ಅಂಕಣಕಾರರೂ ಆದ ಕೃಪಾಕರ –ಸೇನಾನಿ ಅವರು ಪ್ರಶಸ್ತಿ ಪ್ರದಾನ ಮಾಡುವರು. ಚಲನಚಿತ್ರ ನಟರಾದ ರಂಗಾಯಣ ರಘು ಅವರು ಅಧ್ಯಕ್ಷತೆ ವಹಿಸುವರು. ಪ್ರಶಸ್ತಿ ಪ್ರದಾನದ ಬಳಿಕ ‘ಗುರೂಜಿ’ ಎಂಬ ನಾಟಕ ಪ್ರದರ್ಶನಗೊಳ್ಳಲಿದೆ.

Leave a Reply

comments

Related Articles

error: