ಮೈಸೂರು

ರಾಜಕೀಯ ಪಕ್ಷಗಳ ಅಂಕುಶ ಬೇಕಿಲ್ಲ : ಪಕ್ಷೇತರ ಅಭ್ಯರ್ಥಿ ಡಾ.ಎಸ್.ಬಿ.ಎಂ. ಪ್ರಸನ್ನ

ಮೊದಲ ಪ್ರಾಶಸ್ತ್ಯ ಮತ ನೀಡಲು ಮನವಿ

ಮೈಸೂರು,ಜೂ.6 : ಜೂನ್ 8ರಂದು ನಡೆಯುವ ದಕ್ಷಿಣ ಪದವೀಧರ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು ಮೊದಲ ಪ್ರಾಶಸ್ತ್ಯ ಮತವನ್ನು ತಮಗೆ ನೀಡಬೇಕೆಂದು ಡಾ.ಎಸ್ ಬಿ.ಎಂ ಪ್ರಸನ್ನ ರವರು ಮನವಿ ಮಾಡಿದರು.

ನಗರದ ಪತ್ರಕರ್ತರ ಭವನದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಎರಡು ದಶಕಗಳಿಂದ ಸೇವೆ ಸಲ್ಲಿಸುತ್ತ ಬಂದಿದ್ದು, ಅನೇಕ ಸಾಮಾಜಿಕ ಮತ್ತು ಶೈಕ್ಷಣಿಕ ಸಂಘ ಸಂಸ್ಥೆಗಳ ಸಂಸ್ಥಾಪಕನಾಗಿ ಸಕ್ರಿಯ ಸದಸ್ಯನಾಗಿ ಮತ್ತು ಪದಾಧಿಕಾರಿಯಾಗಿ ಸಮಾಜ ಸೇವೆಯನ್ನು ನಿರಂತರವಾಗಿ ಮಾಡುತ್ತಿದ್ದೇನೆ.

ಕೆಲ ಪಕ್ಷಕ್ಕೆ ಸಿಮೀತವಾಗುವುದು ಬೇಡವೆಂದು ಪಕ್ಷೇತರನಾಗಿ ಸ್ಪರ್ಧಿಸಿದ್ದು ತಮಗೆ ಯವುದೇ ಹೈಕಮಾಂಡ್ ನ ಅಂಕುಶವಿಲ್ಲ, , ಅಲ್ಲದೇ ಮತದಾರರಾದ ಶಿಕ್ಷಕರೆ ತಮಗೆ ಹೈ ಕಮಾಂಡ್ ಇದ್ದಂತೆ. ಪಕ್ಷಗಳಿಗೆ ಅವುಗಳದ್ದೆ ಆದ ಹಿಡನ್ ಅಜೆಂಡಾ ಕಾರ್ಯ ಸೂಚಿ ಇರುತ್ತದೆ , ಅದರೆ ನನಗೆ ಯಾವುದೇ ಬಿಡನ್ ಅಜೆಂಡಾ ಹಿಡಿಸುವುದಿಲ್ಲವೆಂದು ತಿಳಿಸಿದರು.

ನಾನೇ ಒಬ್ಬ ಶಿಕ್ಷಕನಾಗಿ ಕ್ಷೇತ್ರ ದ ಜ್ವಲಂತ ಸಮಸ್ಯೆಗಳ ಅರಿವನ್ನು ಸ್ವತಃ ಅನುಭವಿಸುತ್ತಿದ್ದೇನೆ , ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲಲು ಇದಕ್ಕಿಂತ ಬೇರೆ ಅರ್ಹತೆ ಬೇಕಿಲ್ಲ ಎನ್ನುವ ಭಾವನೆ ನನ್ನದು , ನಾನು ಯವುದೇ ಜಾತಿಯೊಂದರ , ಪಕ್ಷವೊಂದರ ಪ್ರತಿನಿಧಿ ಯಾಗದೆ , ಇಡೀ ಶಿಕ್ಷಕರ ಆತ್ಮಗೌರವದ ಪ್ರತಿಕವಾಗಿ ತಮ್ಮಗಳ ಸೇವೆ ಮಾಡಲು ಸಿದ್ದನಿದ್ದನಿದ್ದು  ವಿಧಾನ ಪರಿಷತ್ ಗೆ ನಿಮ್ಮ ಪ್ರತಿನಿಧಿಯಾಗಿ ತೆರಳಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.

ಸುದ್ದಿಗೊಷ್ಠಿಯಲ್ಲಿ ಶಾಂತಕುಮಾರ್, ಜಯಕುಮಾರ್ , ಪ್ರಶಾಂತ್ , ಚಂದ್ರಶೇಖರ್ ರವರು ಉಪಸ್ಥಿತರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: