ಪ್ರಮುಖ ಸುದ್ದಿಮನರಂಜನೆ

ಪ್ಲಾಸ್ಟಿಕ್ ಬ್ಯಾಗ್ ಮುಖಕ್ಕೆ ಹಾಕಿದ್ದಾರೆ ನಟಿ ಕಂಗನಾ ರಾಣಾವತ್!

ದೇಶ(ನವದೆಹಲಿ)ಜೂ.6:- ಪಾಲಿಥಿನ್ ಅಥವಾ ಪ್ಲಾಸ್ಟಿಕ್ ನ ಅತ್ಯಧಿಕ ಬಳಕೆಯಿಂದ ಪರಿಸರಕ್ಕೆ ತೊಂದರೆಯುಂಟಾಗುತ್ತಿದೆ.

ಪ್ಲಾಸ್ಟಿಕ್ ಬಳಕೆ ತಪ್ಪಿಸಲು ಸರ್ಕಾರದ ವತಿಯಿಂದಲೂ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಪರಿಸರಕ್ಕೆ ಪ್ಲಾಸ್ಟಿಕ್ ನಿಂದಾಗುವ ತೊಂದರೆಯನ್ನು ನಿಯಂತ್ರಿಸಲು ಜಾಗೃತಿ ಅಭಿಯಾನವನ್ನು ಕೂಡ ನಡೆಸಲಾಗುತ್ತಿದೆ. ಇದರಿಂದ ಜನತೆಯಲ್ಲಿ ಪ್ಲಾಸ್ಟಿಕ್ ಬ್ಯಾಗ್ ಬಳಕೆಯಿಂದ ಉಂಟಾಗುವ ತೊಂದರೆಯನ್ನು ವಿವರಿಸಲಾಗುತ್ತಿದೆ. ಈ ವರ್ಷ ವಿಶ್ವ ಪರಿಸರ ದಿನಕ್ಕೆ ಪ್ಲಾಸ್ಟಿಕ್ ಮಾಲಿನ್ಯ ತಡೆಗಟ್ಟಿ ಎಂಬ ಘೋಷಣೆಯೊಂದಿಗೆ ಆಚರಿಸಲಾಗಿದ್ದು, ಚಿತ್ರತಾರೆಯರು, ಹಲವು ಗಣ್ಯರು ಸಾಮಾಜಿಕ ಜಾಲತಾಣದಲ್ಲಿ ಸಂದೇಶವನ್ನು ರವಾನಿಸಿದ್ದಾರೆ. ಅದೇ ರೀತಿ ಬಾಲಿವುಡ್ ನಟಿ ಕಂಗನಾ ರಾಣಾವತ್ ವಿಭಿನ್ನ ರೀತಿಯಲ್ಲಿ ತಮ್ಮ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಮುಖವನ್ನು ಪ್ಲಾಸ್ಟಿಕ್ ಬ್ಯಾಗ್ ನಿಂದ ಮುಚ್ಚಿದ್ದ ವಿಡಿಯೋ, ಫೋಟೋ ಶೆರ್ ಮಾಡಿದ್ದು, ಅದರಡಿ ನೀವು ನಿಮ್ಮ ಮುಖವನ್ನು 10ನಿಮಿಷ ಪ್ಲಾಸ್ಟಿಕ್ ನಿಂದ ಮುಚ್ಚಿಕೊಂಡಿರಿ. ಇದರಿಂದ ಯಾವ ರೀತಿ ತೊಂದರೆ ಅನುಭವಿಸಬೇಕೆನ್ನುವುದು ತಿಳಿಯುತ್ತದೆ. ಇದರಿಂದ ಉಸಿರಾಡಲು ಯಾವ ರೀತಿ  ಕಷ್ಟಪಡಬೇಕು ಎನ್ನುವುದು ತಿಳಿಯುತ್ತದೆ. ನಾವು ಇದೇ ರೀತಿ ಪ್ಲಾಸ್ಟಿಕ್ ಉಪಯೋಗಿಸುತ್ತಿದ್ದರೆ ಸಮುದ್ರದಲ್ಲಿ ಮೀನುಗಳ ಬದಲು ಪ್ಲಾಸ್ಟಿಕ್ ಕಾಣ ಸಿಗುತ್ತದೆ ಎಂದು ಬರೆದಿದ್ದು, ಪ್ಲಾಸ್ಟಿಕ್ ಉಪಯೋಗಿಸದಂತೆ ಸಲಹೆ ನೀಡಿದ್ದಾರೆ. (ಎಸ್.ಎಚ್)

Leave a Reply

comments

Related Articles

error: