ಪ್ರಮುಖ ಸುದ್ದಿ

ಮುಂದಿನ ಸಚಿವ ಸಂಪುಟ ವಿಸ್ತರಣೆ ಯಾವಾಗ ನಡೆಯುತ್ತೆ ಎಂಬ ಮಾಹಿತಿ ನೀಡಿದ ಕೃಷ್ಣ ಭೈರೇಗೌಡ

ರಾಜ್ಯ(ಬೆಂಗಳೂರು) ಜೂ.6:- ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಕೃಷಿ ಸಚಿವರಾಗಿ ಕಾರ್ಯನಿರ್ವಹಿಸಿ ಇದೀಗ ಮೈತ್ರಿ ಸರ್ಕಾರದಲ್ಲೂ ಮಂತ್ರಿಗಿರಿ ಪಟ್ಟ ಪಡೆದಿರುವ ಶಾಸಕ ಕೃಷ್ಣ ಭೈರೇಗೌಡ  ಮುಂದಿನ ಸಚಿವ ಸಂಪುಟ ವಿಸ್ತರಣೆ ಯಾವಾಗ ನಡೆಯುತ್ತೆ ಎನ್ನುವ ಮಾಹಿತಿ ನೀಡಿದ್ದಾರೆ.

ಈಗ ಸಿಕ್ಕಿರುವ ಸಚಿವ ಸ್ಥಾನ ಕೇವಲ ಸೀಮಿತ ಅವಧಿಗೆ ಮಾತ್ರ. ಲೋಕಸಭೆ ಚುನಾವಣೆಯ ನಂತರ ಮತ್ತೆ ಸಚಿವ ಸಂಪುಟ ವಿಸ್ತರಣೆಯಾಗುತ್ತದೆ ಎಂದು ಶಾಸಕ ಕೃಷ್ಣೇಭೈರೇಗೌಡ ತಿಳಿಸಿದ್ದಾರೆ. ಈ ಬಗ್ಗೆ ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಕೃಷ್ಣೇಭೈರೇಗೌಡ, ಅಸಮಾಧಾನಿತರು, ಬಂಡಾಯಗಾರರಿಗೂ ಮುಂದೆ ಅವಕಾಶ ಸಿಗುತ್ತದೆ. ಈಗ ಸಿಕ್ಕಿರುವ ಅಧಿಕಾರ ಕೇವಲ ಅಲ್ಪಾವಧಿಗೆ ಮಾತ್ರ ಎಂಬ ನಿರ್ದೇಶನ ಬಂದಿದೆ. ಇನ್ನುಳಿದ 6 ಸಚಿವ ಸ್ಥಾನವನ್ನು ಎರಡು ತಿಂಗಳಲ್ಲಿ ಭರ್ತಿ ಮಾಡಲಾಗುತ್ತದೆ. ಹೀಗಾಗಿ ಮುಂದೆ ಅಸಮಾಧಾನಿತರಿಗೆ ಅವಕಾಶ  ಸಿಗುತ್ತದೆ ಎಂದು ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: