ಕರ್ನಾಟಕ

ಆರ್ ಬಿಐನಿಂದ ರೆಪೋ ದರ ಏರಿಕೆ

ಬೆಂಗಳೂರು,ಜೂ.6-ಕಳೆದ ನಾಲ್ಕು ವರ್ಷಗಳಲ್ಲೇ ಮೊದಲ ಬಾರಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಬುಧವಾರ ರೆಪೋ ದರಗಳಲ್ಲಿ 25 ಅಂಕ ಏರಿಕೆ ಮಾಡಿದೆ.

ಇದರಿಂದ ಬ್ಯಾಂಕ್ಗಳಿಗೆ ರಿಸರ್ವ್ ಬ್ಯಾಂಕ್ ನಿಂದ ನೀಡುವ ಸಾಲದ ಬಡ್ಡಿ ದರ (ರೆಪೋ) ಶೇ. 6.25ಕ್ಕೆ ಹಾಗೂ ಕಮರ್ಷಿಯಲ್ ಬ್ಯಾಂಕ್ಗಳಿಂದ ಪಡೆಯುವ ಸಾಲಕ್ಕೆ ಪಾವತಿಸುವ ಬಡ್ಡಿ ದರವನ್ನು (ರಿವರ್ಸ್ರೆಪೋ) ಶೇ. 6.50ಗೆ ಏರಿಕೆ ಮಾಡಿದೆ. 2014 ಜನವರಿಯ ಬಳಿಕದಲ್ಲಿ ಆರ್ ಬಿಐನಿಂದ ನಿಂದ ನಡೆದಿರುವ ಮೊದಲ ಬಡ್ಡಿ ದರ ಏರಿಕೆಯ ಕ್ರಮ ಇದಾಗಿದೆ.

ಆರ್ ಬಿಐ ಹಣಕಾಸು ನೀತಿ ರೂಪಣೆ ಸಮಿತಿಯ ಎಲ್ಲ ಆರು ಸದಸ್ಯರು ಪ್ರಮುಖ ಬಡ್ಡಿ ದರಗಳನ್ನು ಏರಿಸುವ ಸರ್ವಾನುಮತದ ನಿರ್ಧಾರವನ್ನು ಕೈಗೊಂಡರು. ದೇಶದ ಹಾಲಿ ಸ್ಥೂಲ ಆರ್ಥಿಕ ಸ್ಥಿತಿಗತಿಯನ್ನು ಅನುಲಕ್ಷಿಸಿ ಬಡ್ಡಿ ದರ ಏರಿಸುವ ನಿರ್ಣಯವನ್ನು ಕೈಗೊಳ್ಳಲಾಯಿತೆಂದು ಆರ್ ಬಿಐ ಹೇಳಿದೆ.

2018-19 ಸಾಲಿನಲ್ಲಿ ಏಪ್ರಿಲ್ ನಲ್ಲಿ ನಡೆದಿದ್ದ ಆರ್ ಬಿಐ ಮೊದಲ ದ್ವೆಮಾಸಿಕ ಹಣಕಾಸು ನೀತಿ ಪರಾಮರ್ಶೆಯ ಸಂದರ್ಭದಲ್ಲಿ ವರ್ಷದ ಮೊದಲಾರ್ಧದಲ್ಲಿ ಗ್ರಾಹಕ ಬೆಲೆ ಸೂಚ್ಯಂಕ ಹಣದುಬ್ಬರ ಶೇ.4.7ರಿಂದ ಶೇ.5.1 ನಡುವೆ ಇರುವುದೆಂದು ಅಂದಾಜಿಸಲಾಗಿತ್ತು. ಅದೇ ರೀತಿಯ ವರ್ಷದ ದ್ವಿತೀಯಾರ್ಧದಲ್ಲಿ ಶೇ.4.4 ಹಣದುಬ್ಬರ ಇರುವುದೆಂದು ಅಂದಾಜಿಸಲಾಗಿತ್ತು.

ಏಪ್ರಿಲ್ ಹಣಕಾಸು ನೀತಿಯಲ್ಲಿ ಆರ್ ಬಿಐ 2018-19ರಲ್ಲಿ ದೇಶವು ಶೇ.7.4 ಜಿಡಿಪಿಯನ್ನು ಉಳಿಸಿಕೊಳ್ಳುವುದೆಂದು ಹೇಳಿತ್ತು. ಆದರೆ ಇದೀಗ ಆರ್ ಬಿಐ ಹಣದುಬ್ಬರ ಅಂದಾಜನ್ನು ಪರಿಷ್ಕರಿಸಿದ್ದು, ಪ್ರಕಾರ ವರ್ಷದ ಮೊದಲಾರ್ಧದಲ್ಲಿ ಅದು ಶೇ.4.8ರಿಂದ ಶೇ.4.9ರಲ್ಲೂ ದ್ವಿತೀಯಾರ್ಧದಲ್ಲಿ ಶೇ.4.7 ಪ್ರಮಾಣದಲ್ಲಿ ಇರುವುದೆಂದೂ ಹೇಳಿದೆ. (ಎಂ.ಎನ್)

Leave a Reply

comments

Related Articles

error: