ಮೈಸೂರು

ಜೂ.9ರಂದು ವೈದ್ಯರುಗಳಿಂದ ‘ನಿಸರ್ಗ ವಂದನ’ ಸಂಗೀತ ಕಾರ್ಯಕ್ರಮ

ಮೈಸೂರು,ಜೂ.6 : ನಗರದ ಸರಸ್ವತಿಪುರಂನ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್ ವತಿಯಿಂದ ಪರಿಸರ ಜಾಗೃತಿ ಹಾಗೂ ಸಂರಕ್ಷಣೆಗಾಗಿ ‘ನಿಸರ್ಗ ವಂದನ’ ವೈದ್ಯರಿಂದ ಪರಿಸರ ಗೀತೆಗಳ ಗಾಯನವನ್ನು ಜೂ. 9ರ ಸಂಜೆ 6ಕ್ಕೆ ನಾದಬ್ರಹ್ಮ ಸಂಗೀತ ಸಭಾದ ಸಂಗೀತ ಕಲಾನಿಧಿ ಮೈಸೂರು ವಾಸದೇವಾಚಾರ್ಯ ಭವನದಲ್ಲಿ ಆಯೋಜಿಸಿದೆ ಎಂದು ಟ್ರಸ್ಟ್ ಸಂಸ್ಥಾಪಕಿ ಹೆಚ್.ಆರ್.ಲೀಲಾವತಿ ತಿಳಿಸಿದರು.

ಕೇವಲ ವೈದ್ಯರುಗಳಿಂದಲೇ ನಡೆಯುವ ಈ ಕಾರ್ಯಕ್ರಮವನ್ನು ಉದ್ಯಮಿ ಕುಸುಮ ಶೆಣೈ ಮತ್ತು ಡಾ.ಜಗನ್ನಾಥ ಶೆಣ್ಯ ಉದ್ಘಾಟಿಸುವರು. ಮುಖ್ಯ ಅತಿಥಿಯಾಗಿ ಬೆಂಗಳೂರಿನ ಎನ್ ವಿರೋನ್ ಮೆಂಟ್ ಟ್ರಸ್ಟ್ ಅಧ್ಯಕ್ಷ ಡಾ.ಎ.ಎನ್.ಎಲ್ಲಪ್ಪ ರೆಡ್ಡಿ ಇರುವರು. ಕಾಮಾಕ್ಷಿ ಆಸ್ಪತ್ರೆಯ ಡಾ.ಉಮೇಶ್ ಕಾಮತ್, ಹಾಗೂ ಟ್ರಸ್ಟ್ ಅಧ್ಯಕ್ಷ ಟಿ.ಆರ್.ಹರೀಶ್ ಭಾಗಿಯಾಗುವರು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರಾರ್ಥನೆಯಿಂದ ಸೇರಿದಂತೆ ಪ್ರತಿಯೊಂದು ಗೀತೆಯೂ ಪರಿಸರ ಸಂರಕ್ಷಣೆ ಹಾಗೂ ಜಾಗೃತಿಗಾಗಿ ಮೀಸಲಿರಿಸಿದ್ದು, ಹಿರಿಯ ಸಾಹಿತಿಗಳಾದ ದೊಡ್ಡರಂಗೇಗೌಡ, ಕೆ.ಎಸ್.ನರಸಿಂಹಮೂರ್ತಿ, ಬೆಂಗಳೂರಿನ ವನಿತಾ ಸೇರಿದಂತೆ ತಮ್ಮದೇ ಸ್ವರಚಿತ ಆರು ಹಾಡುಗಳನ್ನು ವೈದ್ಯರುಗಳಾದ ರೋಹಿಣಿ ಮೋಹನ್, ಸುಶ್ಮ ಕೃಷ್ಣಮೂರ್ತಿ, ಎಸ್.ಸುಪ್ರಿತ, ಜಿ.ವಿ.ಭಾರತಿ, ರಶ್ಮಿರಾಣಿ, ಎಂ.ವಿ.ಅಶೋಕ್, ಜಯರಾಂ, ಜಿ.ಡಿ.ರವಿಕುಮಾರ್, ನಾಗೇಂದ್ರ ಪ್ರಸಾದ್, ಎಂ.ವಿ.ದೀಪಕ್, ಕುಲದೀಪ್ ಇವರುಗಳು ಹಾಡುವರು ಎಂದು ತಿಳಿಸಿದರು.

ವಿನೂತನ ಹಾಗೂ ವಿಶೇಷ ಜಾಗೃತಿ ಕಾರ್ಯಕ್ರಮವಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಶ್ರೋತೃಗಳು ಭಾಗವಹಿಸಬೇಕೆಂದು ಮನವಿ ಮಾಡಿದ್ದರು.

ಟ್ರಸ್ಟಿನ ಕಾರ್ಯದರ್ಶಿ ಪ್ರತಿಭಾ ಗುರುರಾಜ್, ಉಪಾಧ್ಯಕ್ಷ ಶ್ರೀಕಾಂತ್ ಗೋಷ್ಠಿಯಲ್ಲಿ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: