ಮೈಸೂರು

ರಾಜಗೋಪಾಲಾಚಾರ್ ರಸ್ತೆ ನಾಮ ಫಲಕ ಅನಾವರಣಗೊಳಿಸಿದ ಪೇಜಾವರ ಶ್ರೀಗಳು

ಮೈಸೂರು,ಜೂ.6;- ಧರ್ಮಕಾರ್ಯಗಳಲ್ಲಿ ನಿರತರಾಗಿದ್ದ ಹಾಗೂ ಪುಸ್ತಕ ರಚನೆ ಮಾಡಿದಂತ ಪಂಡಿತರು ಹಾಗೂ ಸಮಾಜ ಸೇವಕರಾದ ರಾಜಗೋಪಾಲಾಚಾರ್  ಅವರ ಸಮಾಜ ಸೇವೆಯನ್ನು ಗುರುತಿಸಿ ಅವರ ನೆನಪಿನಲ್ಲಿ ವಿಠ್ಠಲ ಧಾಮದ ಎದುರಿನ ರಸ್ತೆಯನ್ನು ರಾಜ ಎಸ್ ರಾಜಗೋಪಾಲಚಾರ್ ರಸ್ತೆ ಎಂದು ನಾಮಕರಣ ಮಾಡಲಾಯಿತು.

ಇಂದು ನಡೆದ ಕಾರ್ಯಕ್ರಮದಲ್ಲಿ  ಪೇಜಾವರ ಶ್ರೀವಿಶ್ವೇಶತೀರ್ಥರು ನಾಮ ಫಲಕವನ್ನು ಅನಾವರಣಗೊಳಿಸಿದರು.  ಈ ಸಂದರ್ಭದಲ್ಲಿ ಮಾಜಿ ಮಹಾ ಪೌರ ಹಾಗೂ ನಗರ ಪಾಲಿಕೆ ಸದಸ್ಯರಾದ ಭೈರಪ್ಪ, ನಗರ ಪಾಲಿಕೆ ಸದಸ್ಯರಾದ ಬಿವಿ ಮಂಜುನಾಥ್, ವಿಪ್ರ ಮುಖಂಡರಾದ ಶ್ರೀಕಂಠಕುಮಾರ್, ವಿ. ಎನ್ .ಕೃಷ್ಣ ರಾಜೇಶ್ ಬೋರೆ ಹಾಗೂ ರಾಜಗೋಪಾಲಾಚಾರ್ ಅವರ ಕುಟುಂಬದವರು  ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: