ಸುದ್ದಿ ಸಂಕ್ಷಿಪ್ತ

ಸ್ನೇಹವೃಂದ ಗೆಳೆಯರ ಬಳಗದಿಂದ ಜೂ.10ರಂದು ಕಣ್ಣಿನ ಉಚಿತ ತಪಾಸಣಾ ಶಿಬಿರ

ಮೈಸೂರು,ಜೂ.6 : ಶಿಕ್ಷಕರ ಬಡಾವಣೆಯ ಡಾ.ರಾಜ್ ಕುಮಾರ್ ರಸ್ತೆಯ ಸಿದ್ದಿ ವಿನಾಯಕ ಬ್ಲಾಕ್ ನ ಸ್ನೇಹವೃಂದ ಗೆಳೆಯರ ಬಳಗದಿಂದ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಕೊಯಮತ್ತೂರು ಅರವಿಂದ ಕಣ್ಣಿನ ಆಸ್ಪತ್ರೆ ವತಿಯಿಂದ ಜೂ.10ರ ಬೆಳಗ್ಗೆ 8.30 ರಿಂದ 1.30ರವರೆಗೆ ಡಾ.ರಾಜ್ ಕುಮಾರ್ ರಸ್ತೆಯಲ್ಲಿರುವ ಮೌಲಾನ ಆಜಾದ್ ಕಾಲೇಜು ಆವರಣದಲ್ಲಿ ಆಯೋಜಿಸಿದೆ.

ಕಣ್ಣಿನ ತೊಂದರೆಗಳಿಗೆ ಶಸ್ತ್ರ ಚಿಕಿತ್ಸೆ, ಪೊರೆ, ಗ್ಲಾಕೋಮ, ನೀರು ಸೋರುವಿಕೆ, ಓರೆಕಣ್ಣು, ಹತ್ತಿರದೃಷ್ಟಿ, ದೂರದೃಷ್ಟಿ ಪರೀಕ್ಷಿಸಲಾಗುವುದು. ಮುಂಚಿತವಾಗಿ ಹೆಸರು ನೋಂದಾಯಿಸಿಕೊಳ್ಳಬಹುದು. ಸುಬೋದ್ 9141799846, 944827041 ಅನ್ನು ಸಂಪರ್ಕಿಸಬಹುದು ಎಂದು ಮೈಕ್ ಪ್ರಕಾಶ್ ಪ್ರಕಟಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: