ಸುದ್ದಿ ಸಂಕ್ಷಿಪ್ತ

ನಾಳೆ ಮಹಾರಾಜ ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚರಣೆ

ಮೈಸೂರು,ಜೂ.6 : ಬಿಲ್ಡ್ರರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ, ಮಹಾರಾಜ ಸರ್ಕಾರಿ ಪದವಿ ಪೂರ್ವ ಕಾಲೇಜು ಸಹಯೋಗದೊಂದಿಗೆ ‘ವಿಶ್ವ ಪರಿಸರ ದಿನಾಚರಣೆ’ ಅಂಗವಾಗಿ ಕಾಲೇಜು ಆವರಣದಲ್ಲಿ ಗಿಡ ನೆಡುವ ಕಾರ್ಯಕ್ರಮವನ್ನು ಜೂ.7ರ ಬೆಳಗ್ಗೆ 8.30ಕ್ಕೆ ಆಯೋಜಿಸಿದೆ.

ಬಿಎಐ ಅಧ್ಯಕ್ಷ ಸುಬ್ರಹ್ಮಣ್ಯರಾವ್, ಪ್ರಾಂಶುಪಾಲರಾದ ಟಿ.ಎಸ್.ಸಿದ್ದರಾಜು, ಬಿಎಐ ಪದಾಧಿಕಾರಿಗಳು, ಎನ್.ಎಸ್.ಎಸ್ ವಿದ್ಯಾರ್ಥಿಗಳು ಇತರರು ಪಾಲ್ಗೊಳ್ಳುವರು ಎಂದು ಎನ್.ಎಸ್ಎಸ್ ಯೋಜನಾಧಿಕಾರಿ ಹೇಳಿಕೆ ನೀಡಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: