ಮೈಸೂರು

ಕಾಲು ನೋವಿನಿಂದ 3 ದಿನದಿಂದ ನೀರಿನಲ್ಲೇ ಇದ್ದ ಆನೆ ಸಾವು

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಮುತ್ತೂರು ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಬರುವ ಬೀಟಿ ಕಟ್ಟೆ ಕೆರೆಯಲ್ಲಿ ಹೆಣ್ಣು ಆನೆಯೊಂದು ನಿಂತಿದ್ದನ್ನು  ಕಂಡ ಗಸ್ತು ಅರಣ್ಯ ಸಿಬ್ಬಂದಿ ಹತ್ತಿರ ಹೋಗಿ ನೋಡಿದಾಗ ಮುಂದಿನ ಕಾಲು ಊದಿರುವುದು ಕಂಡು ಬಂದಿದೆ. ತಕ್ಷಣ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಬುಧವಾರ ಸಂಜೆ ವಿಷಯ ತಿಳಿಸಿದ್ದು ಇಂದು ಬೆಳಗ್ಗೆ ಸಾಕಾನೆಯ ನೆರವಿನಿಂದ ಆನೆಯನ್ನು ಹೊರ ತರಲು ಹೋದಾಗ ಆನೆ ನೀರಿನಲ್ಲಿ ಸತ್ತು ಬಿದ್ದಿದೆ.

ಮೂರು ದಿನ ನೀರಿನಲ್ಲೇ ಇದ್ದ ಆನೆ: ಕಾಡಾನೆಯೊಂದಿಗೆ ಕಾದಾಟ ನಡೆಸಿದ್ದ ಹೆಣ್ಣಾನೆಯ ಕಾಲಿಗೆ  ಗಾಯವಾಗಿದ್ದು, ನೋವು ತಾಳಲಾರದೆ ಕಳೆದ ಮೂರು ದಿನಗಳಿಂದ ಕೆರೆಯ ಮಧ್ಯೆ ನಿಂತಿದೆ. ಈ ಬಗ್ಗೆ ಅರಣ್ಯಾಧಿಕಾರಿಗಳ ಗಮನಕ್ಕೆ ತಂದರೂ ಅವರು ಆನೆ ನೀರು ಕುಡಿಯಲು ಬಂದಿರಬೇಕು ಎಂದು ನಿರ್ಲಕ್ಷ್ಯ ಮಾಡಿದ್ದರು ಎನ್ನಲಾಗಿದೆ. ಮೊದಲೇಏ ಎಚ್ಚೆತ್ತುಕೊಂಡಿದ್ದರೆ ಆನೆಯನ್ನು ಬದುಕಿಸಬಹುದಿತ್ತು ಎನ್ನುತ್ತಾರೆ ಗ್ರಾಮಸ್ಥರು.

ಆನೆ ಸತ್ತ ಮೇಲೆ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು, ಆನೆಯ ಮರಣೋತ್ತರ ಪರೀಕ್ಷೆಯನ್ನು ನಡೆಸಿ ಅಂತ್ಯ ಸಂಸ್ಕಾರವನ್ನು ನೇರವೇರಿಸಿದರು ಎಂದು ಹಿರಿಯ ಅರಣ್ಯಾಧಿಕಾರಿ ನವೀನ್ ತಿಳಿಸಿದ್ದಾರೆ.

Leave a Reply

comments

Related Articles

error: