ಪ್ರಮುಖ ಸುದ್ದಿ

ಕಾಲಾ ಚಿತ್ರದ ಫಸ್ಟ್ ಡೇ ಫಸ್ಟ್ ಶೋ ಫೇಸ್‌ಬುಕ್‌ನಲ್ಲಿ ಲೈವ್‌ ನೀಡಿದ ಯುವಕ ಪೊಲೀಸರ ಬಲೆಗೆ

ರಾಜ್ಯ(ಬೆಂಗಳೂರು)ಜೂ.7:- ರಜನಿಕಾಂತ್ ನಟನೆಯ ‘ಕಾಲಾ’ ಚಿತ್ರದ ಫಸ್ಟ್ ಡೇ ಫಸ್ಟ್ ಶೋ ಫೇಸ್‌ಬುಕ್‌ನಲ್ಲಿ ಲೈವ್‌ ನೀಡಿದ ಯುವಕ  ಸಿಂಗಾಪುರದಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದಾನೆ !

ರಜನಿಕಾಂತ್ ಅಭಿನಯದ ‘ಕಾಲಾ’ಚಿತ್ರವನ್ನು ಫೇಸ್‌ಬುಕ್‌ನಲ್ಲಿ ಲೈವ್ ನೀಡಿದ ವ್ಯಕ್ತಿಯೊಬ್ಬನನ್ನು ಸಿಂಗಾಪುರದಲ್ಲಿ ಪೊಲೀಸರು ಬಂಧಿಸಿದ್ದಾರೆ.’ಕಾಲಾ’ ಚಿತ್ರಮಂದಿರಕ್ಕೆ ಲಗ್ಗೆ ಇಟ್ಟ ಮೊದಲ ಪ್ರದರ್ಶನದಲ್ಲಿಯೇ ಪ್ರವೀಣ್ ಥೇವರ್ ಎಂಬಾತ ಮೊಬೈಲ್ ಮೂಲಕ ಫೇಸ್‌ಬುಕ್‌ನಲ್ಲಿ ಲೈವ್ ನೀಡಿದ್ದ. ಇದನ್ನು ತಿಳಿದ ಥಿಯೇಟರ್ ಸಿಬ್ಬಂದಿ ಪೊಲೀಸರ ಗಮನಕ್ಕೆ ತಂದರು.

ಕೂಡಲೇ ಚಿತ್ರಮಂದಿರಕ್ಕೆ ತೆರಳಿದ ಸಿಂಗಾಪುರ ಪೊಲೀಸರು ಕಾನೂನು ಬಾಹಿರವಾಗಿ ಸಿನಿಮಾ ಲೈವ್ ಮಾಡುತ್ತಿದ್ದ ಪ್ರವೀಣ್‌ ಎಂಬಾತನನ್ನು ಬಂಧಿಸಿದ್ದಾರೆ. ಸುಮಾರು 40ನಿಮಿಷಗಳವರೆಗೆ ಪ್ರವೀಣ್ ಫೇಸ್‌ಬುಕ್‌ನಲ್ಲಿ ಲೈವ್ ನೀಡಿದ್ದು, 12ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: