ಮೈಸೂರು

ಶಂಕಿತ ಉಗ್ರರನ್ನು ಕರೆತಂದ ಎನ್ಐಎ ತಂಡ

ಮೈಸೂರಿನ ನ್ಯಾಯಾಲಯದ ಆವರಣದಲ್ಲಿರುವ ಶೌಚಾಲಯದಲ್ಲಿ ಇತ್ತೀಚೆಗೆ ನಡೆದ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ ಐಎ ಪೊಲೀಸರು ಶಂಕಿತ ಉಗ್ರರನ್ನು ನಗರಕ್ಕೆ ಕರೆತಂದು ಮಹಜರು ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಶಂಕಿತ ಉಗ್ರರಾದ ಅಬ್ಬಾಸ್, ದಾವೂದ್, ಸುಲೈಮಾನ್, ಕರೀಂರಾಜಾ ಹಾಗೂ ಅಯೂಬ್ ಎಂಬವರನ್ನು ಮೈಸೂರಿಗೆ ಕರೆತಂದ ಎನ್ಐಎ ಪೊಲೀಸರು ಉಗ್ರರು ಇಲ್ಲಿಗೆ ಬಂದಾಗ ಮೊಬೈಲ್ ಕರೆನ್ಸಿ ಹಾಕಿದ ಅಂಗಡಿ, ಆಟೋ ಹತ್ತಿರುವ ಸ್ಥಳ ಸೇರಿದಂತೆ ಹಲವು ಜಾಗಗಳ ಮಹಜರು ನಡೆಸಿದರು. ಶಂಕಿತ ಉಗ್ರರು ಕಳೆದ ಆಗಸ್ಟ್ 1ರಂದು ಮೈಸೂರು ಕೋರ್ಟ್ ಶೌಚಾಲಯದಲ್ಲಿ ಕುಕ್ಕರ್ ನಲ್ಲಿ ಕಚ್ಚಾ ಬಾಂಬ್ ಇಟ್ಟು ಸ್ಪೋಟಿಸಿದ್ದರು.

ಈ ಐವರು ಉಗ್ರರಲ್ಲಿ ಒಬ್ಬಾತ ಬಾಂಬ್ ಸ್ಪೋಟಕ್ಕೆ ಹದಿನೈದು ದಿನ ಮೊದಲೇ ಮಯಸೂರಿನ ಯಾವ ಯಾವ ರಸ್ತೆಗಳ ಮೂಲಕ ಕೋರ್ಟ್ ಗೆ ಹೋಗಬಹುದು ಎನ್ನುವುದರ ಕುರಿತು ನೀಲನಕ್ಷೆಯನ್ನು ರೂಪಸಿದ್ದ ಎಂದು ತಿಳಿದುಬಂದಿದೆ. ತಡರಾತ್ರಿಯವರೆಗೂ ಪೊಲೀಸರು ಉಗ್ರರನ್ನು ವಿಚಾರಣೆ ನಡೆಸಿದ್ದು ಬಳಿಕ ಮಧುರೈಗೆ ಕರೆದೊಯ್ದಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

Leave a Reply

comments

Related Articles

error: