
ಕರ್ನಾಟಕ
ಯುವ ಜನತೆಗೆ ಉದ್ಯೋಗ ಸೃಷ್ಟಿಸಬೇಕು: ಉದ್ಯಮಿ ಹೆಚ್.ಎ. ಕಿರಣ್
ಬೆಂಗಳೂರು (ಜೂನ್ 7): ಬೆಂಗಳೂರಿನ ಎಫ್.ಕೆ.ಸಿ.ಸಿ.ಐ ಸಭಾಂಗಣದ ಸರ್.ಎಂ. ವಿಶ್ವೇಶ್ವರಯ್ಯ ಹಾಲ್ನಲ್ಲಿ ನೆಡೆದ ಎಫ್.ಕೆ.ಸಿ.ಸಿ.ಐ ಮಂಥನ್ ಗ್ರಾಂಡ್ ಫೈನಲ್ ಫಿನಾಲಿ ಮತ್ತು ಪ್ರಶಸ್ತಿ ಪ್ರಧಾನ ಸಮರಂಭ ಇತ್ತಿಚಿಗೆ ನೆಡೆಯಿತು.
ಪ್ರಸ್ತಾವಿಕವಾಗಿ ಮಾತನಾಡಿದ ಹಾಸನ ಮೂಲದ ಉದ್ಯಮಿ ಹಾಗೂ ಎಫ್.ಕೆ.ಸಿ.ಸಿ.ಐ ಮಂಥನ್ ಸಮಿತಿಯ ಮುಖ್ಯಸ್ಥರಾದ ಹೆಚ್.ಎ ಕಿರಣ್ ಅವರು ರಾಜ್ಯದ ಯುವ ಜನತೆಯು ಉದ್ಯೋಗವನ್ನು ಸೃಷ್ಟಿಸಬೇಕೆ ಹೊರತು ಉದ್ಯೋಗವನ್ನು ಕೆಳುವಂತರಾಗಬಾರದು, ಪ್ರತಿ ಜಿಲ್ಲೆಯಲ್ಲಿಯೂ ಉದ್ಯಮಗಳು ಹೆಚ್ಚಬೇಕು ನಿರುದ್ಯೋಗ ಸಮಸ್ಯೆ ನಿಮೂರ್ಲನೆ ಮಾಡುವಲ್ಲಿ ನಾವೆಲ್ಲರೂ ಶ್ರಮಿಸಬೇಕು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಧರ್ಮಸ್ಥಳ ಧರ್ಮಾಧಿಕಾರಿ ಡಾ|| ವೀರೇಂದ್ರ ಹೆಗಡೆ ಅವರು ಎಫ್.ಕೆ.ಸಿ.ಸಿ.ಐ ಕಾರ್ಯಕ್ರಮವಾದ ಮಂಥನ್ ಹೆಚ್ಚಿನ ಉದ್ಯಮ ಶೀಲತೆಯನ್ನು ಪ್ರೆರೇಪಿಸುವ ಬಗ್ಗೆ ಬಹಳಷ್ಟು ಹೆಮ್ಮೆ ವ್ಯಕ್ತ ಪಡಿಸಿದರು.
ಕಾರ್ಯಕ್ರಮದಲ್ಲಿ ಕೈಗಾರಿಕಾ ಅಭಿವೃದ್ದಿ ಮತ್ತು ವಾಣಿಜ್ಯ ಇಲಾಖೆ ಅಧಿಕಾರಿ ಧರ್ಮಪಾಲ್ ಜೈನ್ ಮಾತನಾಡಿ ಎಫ್.ಕೆ.ಸಿ.ಸಿ.ಐ ಕಾರ್ಯಕ್ರಮಕ್ಕೆ ಸರ್ಕಾರದಿಂದ ಹೆಚ್ಚಿನ ಬೆಂಬಲವನ್ನು ಕೊಡುವುದಾಗಿ ಭರವಸೆ ನೀಡಿದರು.
3 ಲಕ್ಷ ಉದ್ಯೋಗವನ್ನು ಸೃಷ್ಟಿಸಲು 1 ಲಕ್ಷ ಕೋಟಿ ಬಂಡವಾಳವನ್ನು ಕರ್ನಾಟಕಕ್ಕೆ ತರುವ ವ್ಯಾಪಕ ಚರ್ಚೆ ನೆಡೆಸಲಾಯಿತು. ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಕೆ.ರವಿ ಅವರು ಸ್ವಾಗತವನ್ನು ಕೋರಿದರು ಹಾಗೂ ನಿಯೋಜಿತ ಅಧ್ಯಕ್ಷರಾದ ಸುಧಾಕರ್ ಎಸ್ ಶೆಟ್ಟರ್ ಅವರು ವಂದನಾರ್ಪಣೆಯನ್ನು ಮಾಡಿದರು. (ಎನ್.ಬಿ)