ಕರ್ನಾಟಕ

ಕಾಲು ನೋವಿನಿಂದ ನರಳಿ ನರಳಿ ಪ್ರಾಣಬಿಟ್ಟ ಕಾಡಾನೆ ಸಿದ್ದ

ಕಳೆದ 99 ದಿನಗಳಿಂದ ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಕಾಡಾನೆ ಸಿದ್ದ ಕೊನೆಗೂ ಇಹಲೋಕ ತ್ಯಜಿಸಿದ್ದಾನೆ. ಸಿದ್ದನ ಆರೋಗ್ಯ ಸುಧಾರಣೆಗಾಗಿ ನಡೆಸಿದ ಪೂಜೆಗಳೆಲ್ಲವೂ ವ್ಯರ್ಥವಾಗಿದ್ದು, ಶುಕ್ರವಾರ ಬೆಳಗಿನ ಜಾವ 3ರ ಸುಮಾರಿಗೆ ಮೃತಪಟ್ಟಿದ್ದಾನೆ ಎನ್ನಲಾಗಿದೆ.

ಆಗಸ್ಟ್ 30ರಂದು ಬೆಂಗಳೂರು ದಕ್ಷಿಣ ತಾಲೂಕಿನ ಗೋಪಾಲನಗರ ಕಾಲುವೆಗೆ ಬಿದ್ದು ಕಾಲು ಮುರಿದುಕೊಂಡಿದ್ದ ಸಿದ್ದನಿಗೆ 50 ದಿನ ಕಳೆದರೂ ಯಾವುದೇ ಚಿಕಿತ್ಸೆ ಲಭಿಸಿರಲಿಲ್ಲ. ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಸ್ಥಳೀಯರು ಗಾಯಗೊಂಡು ನಿಂತಿದ್ದ ಆನೆಯನ್ನು ಕಾಡಿಗೆ ಟ್ಟಲು ಯತ್ನಿಸಿದ್ದು ಸೆ.2ರಂದು ಈ ಆನೆ ಮಂಚನಬೆಲೆ ಜಲಾಶಯದ ಹಿನ್ನೀರು ಸೇರಿತ್ತು. ಅಲ್ಲೇ 50 ದಿನಗಳ ಕಾಲ ಕುಂಟುತ್ತಾ ಜೀವನ ಸಾಗಿಸುತ್ತಿದ್ದು, ಮಾಧ್ಯಮದಲ್ಲಿ ವರದಿ ಪ್ರಕಟವಾದ ಬಳಿಕ ಅಧಿಕಾರಿಗಳು ಚಿಕಿತ್ಸೆಯನ್ನಾರಂಭಿಸಿದ್ದರು.

ಹೊರ ರಾಜ್ಯದಿಂದ ವೈದ್ಯರನ್ನು ಕರೆಯಿಸಿ ಚಿಕಿತ್ಸೆ ನೀಡಲಾಗಿದ್ದು, ಸಿದ್ದನ ಆರೋಗ್ಯದಲ್ಲಿ ಸುಧಾಋಣೆಯೂ ಕಂಡುಬಂದಿತ್ತು. ಆದರೆ, ಕಳೆದೊಂದು ವಾರದಿಂದ ಅತಿಯಾಗಿ ಬಳಲಿದಂತೆ ಕಂಡು ಬರುತ್ತಿದ್ದ ಆತ ಶುಕ್ರವಾರ ಮುಂಜಾನೆ ಮೃತಪಟ್ಟಿದ್ದಾನೆ.

sidda-2

Leave a Reply

comments

Related Articles

error: